ಜಗತ್ತಿನ ಅತ್ಯಂತ ಸುಂದರ ನಟ ಎಂಬ ಗೌರವಕ್ಕೆ ಭಾಜನರಾದ ನಟ ಹೃತಿಕ್ ರೋಷನ್

ಹೃತಿಕ್ ರೋಷನ್ ಈಗಾಗಲೇ ಏಷ್ಯಾದ ಅತ್ಯಂತ ಸೆಕ್ಸಿ ಪುರುಷ, ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಬಿರಿದಿಗೂ ಪಾತ್ರರಾಗಿದ್ದರು. ಇನ್ನೊಬ್ಬ ನಟ ಸಲ್ಮಾನ್ ಖಾನ್ ಈ ವರ್ಷ 5ನೇ ಸ್ಥಾನ ಪಡೆದಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ಬಾಲಿವುಡ್ ನ ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ ಇಬ್ಬರೇ ಸ್ಥಾನ ಪಡೆದಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಷನ್ ಜಗತ್ತಿನ ಅತ್ಯಂತ ಸುಂದರ ನಟ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಹಾಲಿವುಡ್ ನ ಸುಂದರಾಂಗ ನಟರಾದ ರಾಬರ್ಟ್ ಪ್ಯಾಟಿಸನ್, ಕ್ರಿಸ್ ಇವಾನ್ಸ್ ಅವರನ್ನು ಹಿಂದಿಕ್ಕಿ ಬಾಲಿವುಡ್ ನಲ್ಲಿ ಗ್ರೀಕ್ ಗಾಡ್ ಎಂದು ಕರೆಯಲ್ಪಡುವ ಹೃತಿಕ್ ರೋಷನ್ ಈ ವರ್ಷದ ಜಗತ್ತಿನ ಸ್ಫುರದ್ರೂಪಿ ನಟ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನಟರ ಚಹರೆ, ಬಾಕ್ಸ್ ಆಫೀಸ್ ಗಳಿಕೆ, ಜಗತ್ತಿನದ್ದುಕ್ಕೂ ಇರುವ ಫ್ಯಾನ್ ಫಾಲೋವರ್ಸ್, ನಟರು ಮಾಡಿಕೊಂಡಿರುವ ಜಾಹಿರಾತು ಒಡಂಬಡಿಕೆ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ಮೊದಲ ಸ್ಥಾನದಲ್ಲಿ ಹೃತಿಕ್ ರೋಷನ್ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ರಾಬರ್ಟ್ ಪ್ಯಾಟಿಸನ್, ಗಾಡ್ ಫ್ರೇ ಗಾವೋ, ಕ್ರಿಸ್ ಇವಾನ್ಸ್, ಸಲ್ಮಾನ್ ಖಾನ್, ಡೇವಿಡ್ ಬೋರಿಯಾನಾಜ್, ನೋವಾ ಮಿಲ್ಸ್, ಹೆನ್ರಿ ಕವಿಲ್, ಟಾಮ್ ಹಿಡಿಲ್ ಸ್ಟನ್ ಮತ್ತು ಸಾಮ್ ಹ್ಯೂಗನ್ ಇದ್ದಾರೆ.
Comments