ಅಭಿಮಾನಿಗಳಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡ್ತಿದೆ ಟಗರು ಚಿತ್ರ..!!

ಸದ್ಯ ಚಿತ್ರಕ್ಕೆ ಬಾಲಿವುಡ್ ಮತ್ತು ಟಾಲಿವುಡ್ ನಿಂದ ಬಾರಿ ಬೇಡಿಕೆ ಬಂದಿದೆಯಂತೆ. ಡಬ್ಬಿಂಗ್ ರೈಟ್ಸ್ ಗಾಗಿ ನಿರ್ಮಾಪಕರನ್ನ ಪರಭಾಷೆಯ ಪ್ರೊಡ್ಯೂಸರ್ ಗಳು ಸಂಪರ್ಕ ಮಾಡಿದ್ದಾರೆ. ಚಿತ್ರ ತೆರೆಗೆ ಬರುವ ಮುಂಚೆಯೇ ಈ ಮಟ್ಟಕ್ಕೆ ಟಗರು ಹವಾ ಸೃಷ್ಟಿ ಮಾಡಿದ್ದು ಕನ್ನಡ ಸಿನಿಮಾ ಅಭಿಮಾನಿಗಳಿಗೆ ಖುಷಿ ತಂದಿದೆ.
ದುನಿಯಾ ಸೂರಿ ಟಗರು ಸಿನಿಮಾವನ್ನ ನಿರ್ದೇಶನ ಮಾಡಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾದ ಟೈಟಲ್ ಸಾಂಗ್ ಎಲ್ಲೆಡೆ ಫೇಮಸ್ ಆಗಿದ್ದು ಶಿವಣ್ಣ ಭೇಟಿ ನೀಡುವ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಬೇರೆ ಸಿನಿಮಾ ಸೆಟ್ ಗಳಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಟಗರು ಸಿನಿಮಾದಲ್ಲಿ ಶಿವಣ್ಣನ ಜೊತೆಯಲ್ಲಿ ಮತ್ತಷ್ಟು ಕಲಾವಿದರು ಅಭಿನಯಿಸಿರುವುದರಿಂದ ಚಿತ್ರವನ್ನ ನೋಡಲು ಅಭಿಮಾನಿಗಳ ಸಮೂಹವೇ ಕಾದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿರುವ ಸೂರಿ ಅಂಡ್ ಟೀಂ ಫೆಬ್ರವರಿಯಲ್ಲಿ ಚಿತ್ರವನ್ನ ತೆರೆಗೆ ತರಲಿದ್ದಾರೆ.
Comments