ಬಿಗ್ ಟ್ವಿಸ್ಟ್ : ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟಆಶಿತಾ ..!

ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಸಾಕಷ್ಟು ಇಂಟ್ರಸ್ಟಿಂಗ್ ವಿಷಯಗಳು ನಡಿತಿದೆ. ದಿನೇ ದಿನೇ ಕುತೂಹಲ ಹೆಚ್ಚುವಂತೆ ಮಾಡ್ತಿದ್ದಾರೆ ಬಿಗ್ ಬಾಸ್.
ಹೌದು, ಬಿಗ್ ಬಾಸ್ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಲು ಸಾಕಷ್ಟು ಟ್ವಿಸ್ಟ್ ಹಾಗೂ ಸರ್ಪೈಸ್ ಗಳನ್ನು ನೀಡ್ತಿದ್ದಾರೆ. ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಸ್ಪರ್ಧಿಗಳನ್ನು ಸಾಕಷ್ಟು ಖುಷಿ ಪಡಿಸಲಾಗುತ್ತಿದೆ. ಹೀಗಾಗಿ ಈ ಟ್ವಿಸ್ಟ್ ಹಾಗೂ ಸರ್ಪೈಸ್ ಗಳು.ಕಳೆದ ವಾರ ಸ್ಪರ್ಧಿಗಳು ಮನೆಯವರನ್ನು ಕಳುಹಿಸುವ ಮೂಲಕ ಸರ್ಪೈಸ್ ನೀಡಿದರು, ನಂತರ ಕಿಚ್ಚನನ್ನು ಕಳುಹಿಸಲಾಯಿತು. ಇದೀಗ ಮತ್ತೆ ಬಿಗ್ ಬಾಸ್ ಯಾರನ್ನ ಮನೆಯೊಳಗೆ ಕಳುಹಿಸಿದ್ದಾರೆ ಗೊತ್ತಾ..?
ಈ ಬಾರಿ ಬಿಗ್ ಬಾಸ್ ಮನೆಗೆ ಬಿಗ್ ಎಂಟ್ರಿ ಕೊಟ್ಟವರು ದೊಡ್ಡ ಮನೆಯಿಂದ ಎಲಿಮಿನೆಟ್ ಆದವರು. ಯಸ್ ಅವರು ಬೇರೆ ಯಾರು ಅಲ್ಲ ಆಶಿತಾ ಹಾಗೂ ತೇಜಸ್ವಿನಿ. ಹೌದು, ಇದೇ ಇಂದಿನ ಪ್ರೋಮೊ ವಿಶೇಷತೆ.ಲಿವಿಂಗ್ ಎರಿಯಾದಲ್ಲಿ ಇದ್ದ ಸ್ಪರ್ಧಿಗಳಿಗೆ ಆಶಿತಾ ಹಾಗೂ ತೇಜಸ್ವಿನಿ ಸರ್ಪೈಸ್ ಎಂಟ್ರಿಯಿಂದ ಖುಷಿ ಕೊಟ್ಟಿದೆ. ಎಲ್ಲರು ಖುಷಿಯಿಂದ ತಬ್ಬಿಕೊಂಡು ಸಂತಸಪಟ್ಟರು. ಮತ್ತೆ ಯಾರ್ಯಾರು ದೊಡ್ಡ ಮನೆಗೆ ಬರಲಿದ್ದಾರೆ ಎಂದು ಕಾದುನೋಡಬೇಕಿದೆ. ಸದ್ಯಕ್ಕೆ ಇವರಿಬ್ಬರ ಎಂಟ್ರಿ ಎಲ್ಲರಿಗೂ ಖುಷಿ ತಂದಿದೆ.
Comments