ಜೀವ ಬೆದರಿಕೆಗೆ ಹೆದರದ ಬಾಲಿವುಡ್ ನಟ ಸಲ್ಮಾನ್ ಖಾನ್

ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗಾಗಿ ಇತ್ತೀಚೆಗಷ್ಟೆ ನಟ ಸಲ್ಮಾನ್ ಖಾನ್ ಜೋಧ್ಪುರ ಕೋರ್ಟ್ ಗೆ ಬಂದಿದ್ದರು. ಅಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೊಯ್ ಎಂಬಾತ ಸಲ್ಮಾನ್ ಗೆ ಜೀವ ಬೆದರಿಕೆ ಹಾಕಿದ್ದ. ಜೋಧ್ಪುರದಲ್ಲೇ ನಟನನ್ನು ಹತ್ಯೆ ಮಾಡೋದಾಗಿ ಎಚ್ಚರಿಕೆ ನೀಡಿದ್ದ.
ದರೋಡೆಕೋರ ಬೆದರಿಕೆ ಹಾಕಿದ ಬೆನ್ನಲ್ಲೇ ಪೊಲೀಸರು ರೇಸ್ 3 ಸಿನೆಮಾ ಸೆಟ್ ನಲ್ಲಿ ಪ್ರತ್ಯಕ್ಷರಾಗಿದ್ರು. ಮುಂಜಾಗ್ರತಾ ದೃಷ್ಟಿಯಿಂದ ಕೂಡಲೇ ಸಿನೆಮಾ ಶೂಟಿಂಗ್ ನಿಲ್ಲಿಸುವಂತೆ ನಟ ಸಲ್ಮಾನ್ ಖಾನ್ ಹಾಗೂ ನಿರ್ಮಾಪಕ ರಮೇಶ್ ತೊರಾನಿ ಅವರಲ್ಲಿ ಪೊಲೀಸರು ಮನವಿ ಮಾಡಿಕೊಂಡ್ರು. ಆ ದಿನ ಪೊಲೀಸರ ಸಲಹೆಗೆ ಕಿವಿಗೊಟ್ಟ ಸಲ್ಮಾನ್ ಶೂಟಿಂಗ್ ನಿಲ್ಲಿಸಿ ಮನೆಗೆ ತೆರಳಿದ್ರು. ಆದ್ರೆ ನಂತರ ಟೈಟ್ ಸೆಕ್ಯೂರಿಟಿ ನಡುವೆ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್, ಅನಿಲ್ ಕಪೂರ್ ಸೇರಿದಂತೆ ಸಹ ಕಲಾವಿದರೊಂದಿಗೆ ಸಲ್ಮಾನ್, ಮುಂಬೈನ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಸ್ತಿದ್ದಾರೆ. ಜೀವ ಬೆದರಿಕೆ ಬಗ್ಗೆ ಸಲ್ಮಾನ್ ತಲೆಕೆಡಿಸಿಕೊಂಡಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ.
Comments