ಚಂದನ್ ಶೆಟ್ಟಿ ಸೂಪರ್ ಹಿಟ್ ಹಾಡುಗಳ ಹಿಂದಿದೆ ಒಬ್ಬ ಕಾಣದ ವ್ಯಕ್ತಿಯ ಸಹಾಯ..!!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಸಿಂಪಲ್ಲಾಗ್ ಒಂದ್ ಥ್ಯಾಂಕ್ಸ್ ಹೇಳಿ' ಎಂಬ ಸಿಂಪಲ್ ಟಾಸ್ಕ್ ಅನ್ನು ಮನೆಯ ಸದಸ್ಯರಿಗೆ ನೀಡಲಾಗಿತ್ತು. ಅದೇ ರೀತಿ ಮನೆಯ ಎಲ್ಲರೂ ಕೂಡ ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ತಮಗೆ ಸಹಾಯ ಮಾಡಿದ ಬೇರೆ ಬೇರೆ ವ್ಯಕ್ತಿಗಳಿಗೆ ಧನ್ಯವಾದ ಹೇಳಿದರು. ಈ ವೇಳೆ ಚಂದನ್ ಶೆಟ್ಟಿ ದಿನೇಶ್.ವಿ ಎಂಬುವವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಹಿಂದೆ ಚಂದನ್ ಶೆಟ್ಟಿ ಅವರಿಗೆ ಅವರ ''ಹಾಳಾಗೋದೆ...'' ಹಾಡನ್ನು ಶೂಟಿಂಗ್ ಮಾಡುವುದಕ್ಕೆ ದುಡ್ಡು ಇರಲಿಲ್ಲವಂತೆ. ಈ ವೇಳೆ ಒಮ್ಮೆ ಚಂದನ್ ಸ್ಟೂಡಿಯೊಗೆ ಭೇಟಿ ನೀಡಿ ಹಾಡು ಕೇಳಿದ ದಿನೇಶ್ ಇಷ್ಟ ಪಟ್ಟು ನಾನೇ ಈ ಹಾಡನ್ನು ಪ್ರೋಡ್ಯೂಸ್ ಮಾಡುತ್ತೇನೆ ಅಂತ ಹೇಳಿದರಂತೆ. ಆ ಹಾಡು ಹಿಟ್ ಆದ ನಂತರ ಅವರ 'ಮೂರೇ ಮೂರು ಪೆಗ್..' ಹಾಡನ್ನು ಕೂಡ ಅವರೇ ನಿರ್ಮಾಣ ಮಾಡಿದ್ದಾರೆ. ಸೋ, 'ಬಿಗ್ ಬಾಸ್' ಮನೆಯಲ್ಲಿ ತಮ್ಮ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದ ದಿನೇಶ್ ಅವರಿಗೆ ಧನ್ಯವಾದ ಹೇಳಿ ಚಂದನ್ ಹಳೆಯ ಘಟನೆಯನ್ನು ನೆನಪು ಮಾಡಿಕೊಂಡರು.
Comments