ಬಿಗ್ ಬಾಸ್' ಸದಸ್ಯರೆಲ್ಲರ ಮೆಚ್ಚುಗೆಗೆ ಪಾತ್ರಳಾದ ನಿವೇದಿತಾ..!!

'ಬಿಗ್ ಬಾಸ್' ಮನೆಯೊಳಗೆ ನಿವೇದಿತಾ ಅವರಿಗೆ ಸದಸ್ಯರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮನೆಯೊಳಗೆ ಸದಸ್ಯರು ಆಗಮಿಸಿದ ಸಂದರ್ಭದಲ್ಲಿ ಅವರ ಜೋಡಿ ಸದಸ್ಯರು ಮಡಿಕೆಯನ್ನು ಬ್ಯಾಲೆನ್ಸ್ ಮಾಡಿ ಹಿಡಿದಿಟ್ಟುಕೊಳ್ಳಬೇಕಿದೆ. ದಿವಾಕರ್ ಅವರ ಪತ್ನಿ ಬಂದಿದ್ದ ಸಂದರ್ಭದಲ್ಲಿ ನಿವೇದಿತಾ ಮಡಿಕೆಯನ್ನು ಬರೋಬ್ಬರಿ ಅರ್ಧ ಗಂಟೆ ಕಾಲ ಬ್ಯಾಲೆನ್ಸ್ ಮಾಡಿ ಹಿಡಿದುಕೊಂಡಿದ್ದಾರೆ.
'ಬಿಗ್ ಬಾಸ್' ನೀಡಿದ ಸಮಯಕಾಶ ಮುಗಿದರೂ, ನಿವೇದಿತಾ ಮಡಿಕೆಯನ್ನು ಹಿಡಿದುಕೊಂಡಿದ್ದು, ಇಷ್ಟು ಸಮಯ ದಿವಾಕರ್ ಅವರ ಪತ್ನಿ ಮನೆಯೊಳಗೆ ಇದ್ದಾರೆ.ಇದುವರೆಗೆ ಮಡಿಕೆ ಹಿಡಿದುಕೊಂಡಿದ್ದ ಸದಸ್ಯರೆಲ್ಲರೂ ಕೆಲವೇ ನಿಮಿಷಗಳಲ್ಲೇ ಬ್ಯಾಲೆನ್ಸ್ ತಪ್ಪಿದ್ದಾರೆ. ನಿವೇದಿತಾ ಅರ್ಧ ಗಂಟೆಗೂ ಅಧಿಕ ಕಾಲ 'ಬಿಗ್ ಬಾಸ್' ಸೂಚನೆಯವರೆಗೂ ಮಡಿಕೆ ಹಿಡಿದಿಟ್ಟುಕೊಂಡಿದ್ದಕ್ಕೆ ಮನೆಯೊಳಗಿನ ಸದಸ್ಯರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿವೇದಿತಾ ಅವರ ತಾಯಿ ಬಂದಿದ್ದ ಸಂದರ್ಭದಲ್ಲಿ ದಿವಾಕರ್ ಕೆಲವೇ ನಿಮಿಷದಲ್ಲಿ ಮಡಿಕೆ ಬೀಳಿಸಿದ್ದರು. ನಿವೇದಿತಾ ಸುದೀರ್ಘ ಸಮಯ ಮಡಿಕೆ ಬ್ಯಾಲೆನ್ಸ್ ಮಾಡಿದ್ದಕ್ಕೆ ದಿವಾಕರ್ ಕೃತಜ್ಞತೆ ಸಲ್ಲಿಸಿದ್ದು, ಬೇರೆಯವರ ಬಳಿ ಮಾತನಾಡುತ್ತಾ, ನಿವೇದಿತಾ ಎದುರು ನಾನು ಚಿಕ್ಕವನಾದೆ ಎಂದು ಹೇಳಿದ್ದಾರೆ.
ಮನೆಯೊಳಗೆ ಬಂದ ದಿವಾಕರ್ ಅವರ ಪತ್ನಿ ಎಲ್ಲರೊಂದಿಗೆ ಮಾತನಾಡಿದ್ದಾರೆ. ನೀವು ವಿನ್ ಆಗಬೇಕೆಂದು ದಿವಾಕರ್ ಗೆ ಹೇಳಿದ್ದಾರೆ. ಅದು ನನ್ನ ಕೈಯಲ್ಲಿಲ್ಲ ಎಂದು ದಿವಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸದಸ್ಯರೆಲ್ಲರೂ ನಗುತ್ತಾ ಇರಿ ಎಂದು ಹೇಳಿ ದಿವಾಕರ್ ಪತ್ನಿ ಮನೆಯಿಂದ ಹೊರಗೆ ಹೋಗಿದ್ದಾರೆ. ಚಂದನ್ ಅವರ ತಂದೆ ಬಂದಿದ್ದ ಸಂದರ್ಭದಲ್ಲಿ ರಿಯಾಜ್ ಮಡಿಕೆ ಬ್ಯಾಲೆನ್ಸ್ ಮಾಡಲು ವಿಫಲರಾಗಿದ್ದಾರೆ. ಕೆಲವೇ ನಿಮಿಷದಲ್ಲಿ ಮಡಿಕೆ ಬೀಳಿಸಿ, ಅದಕ್ಕಾಗಿ ಬೇಸರಗೊಂಡು ಸಾರಿ ಕೇಳಿದ್ದಾರೆ. ಚಂದನ್ ಇರಲಿ ಬಿಡು ಎಂದು ಸಮಾಧಾನಪಡಿಸಿದ್ದಾರೆ. ಚಂದನ್ ಅವರ ತಂದೆ ಮನೆಯೊಳಗೆ ಬಂದ ಸಂದರ್ಭ ಸಂತಸದಿಂದ ಕೂಡಿತ್ತು.
Comments