ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿರುವ ಹುಚ್ಚ ವೆಂಕಟ್

11 Jan 2018 11:26 AM | Entertainment
308 Report

ಲಾಂಗು ಮಚ್ಚುಗಳ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ವೆಂಕಟ್ ಇನ್ನು ಮುಂದೆ, ಕ್ಯಾಮರಾ, ಮೈಕ್ ಹಿಡಿದು ಬರಲಿದ್ದಾರೆ. ಈಗಾಗಲೇ ಮಡಿಕೇರಿ ಸುತ್ತಮುತ್ತ ಚಿತ್ರದ ಹಾಡೊಂದರ ಚಿತ್ರೀಕರಣ ಭರದಿಂದ ಸಾಗಿದೆ. ಮಾಧ್ಯಮದವರ ಮೇಲಿನ ಪ್ರೀತಿಯೇ ಈ ಸಾಹಸಕ್ಕೆ ಕಾರಣ ಎಂದು ವೆಂಕಟ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಚಿತ್ರಕ್ಕಾಗಿ ಐಶ್ವರ್ಯ ಸೇನ್ ಎಂಬವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವೆಂಕಟ್ ಹೇಳಿದರು. ಮಾಧ್ಯಮದವರೂ ಪೊಲೀಸರಂತೆ ಕಾರ್ಯನಿರ್ವಹಿಸುತ್ತಾರೆ. ಆನೇಕ ಅವ್ಯವಹಾರಗಳನ್ನು, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತಾರೆ. ಆದರೆ, ಸಮಾಜಮುಖಿ ಕೆಲಸ ಮಾಡುವ ಇದೇ ಮಾಧ್ಯಮದವರು ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆಯಂತಹ ಸನ್ನಿವೇಶಗಳಿಗೂ ತುತ್ತಾಗಬೇಕಾಗುತ್ತದೆ. ಈ ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ನಿರ್ಮಿಸುತ್ತಿರುವುದಾಗಿ ವೆಂಕಟ್ ತಿಳಿಸಿದ್ದಾರೆ. 

ಹುಚ್ಚ ವೆಂಕಟ್ ಕೇವಲ ಸಿನಿಮಾಕ್ಕೆ ಸೀಮಿತವಲ್ಲ. ಸಮಾಜಕ್ಕೂ ಬೇಕಾದವನು ಎಂಬ ಸತ್ಯವನ್ನರಿತ ಮಾಧ್ಯಮಗಳು ನನ್ನನ್ನು  ಬೆಳೆಸಿದರು ಎಂದು ಹೇಳಿದ ವೆಂಕಟ್, ಚಿತ್ರಕ್ಕೆ ಸತೀಶ್ ಬಾಬು ಸಂಗೀತವಿದೆ. ಎಲ್ಲ ಹಾಡುಗಳನ್ನು ತಾವೇ ಹಾಡಿರುವುದಾಗಿ ಹೇಳಿದರು. ತಂದೆಯ ಪಾತ್ರಕ್ಕೆ ಹಿರಿಯ ನಟ ಶ್ರೀನಾಥ್ ಅವರನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು. ಕಳೆದ ನಾಲ್ಕೈದು ದಿನಗಳಿಂದ ಚಿತ್ರೀಕರಣ ಭಾಗಮಂಡಲ, ತಲಕಾವೇರಿ, ಮಡಿಕೇರಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ ಹುಚ್ಚ ವೆಂಕಟ್, ಪುಣ್ಯಕ್ಷೇತ್ರ ತಲಕಾವೇರಿಗೆ ಸಂಪರ್ಕಿಸುವ ರಸ್ತೆ ಗಬ್ಬೆದ್ದಿರುವ ಬಗ್ಗೆ  `ಯೂಟ್ಯೂಬ್'ನಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ಸ್ಪಷ್ಟಪಡಿಸಿದರು.
 

Edited By

Shruthi G

Reported By

Madhu shree

Comments