ಅನುಷ್ಕಾ ಶರ್ಮ ನಟನೆಯ 'ಪರಿ' ಚಿತ್ರದ ಟೀಸರ್ ಟ್ವಿಟರ್ ನಲ್ಲಿ ಬಿಡುಗಡೆ

10 Jan 2018 5:54 PM | Entertainment
372 Report

ವಿವಾಹ ಮುಗಿದ ಬಳಿಕ ಮತ್ತೆ ವೃತ್ತಿಜೀವನಕ್ಕೆ ಮರಳಿದ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ 'ಪರಿ'ಯ ಟೀಸರ್ ನ್ನು ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ. ತಮ್ಮದೇ ನಿರ್ಮಾಣದ 'ಪರಿ'ಯ ಟೀಸರ್ ನಲ್ಲಿ ಅನುಷ್ಕಾ ಶೋಷಿತ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ಕಾದು ನಿಂತಂತೆ ಕಾಣಿಸುವ ವೀಡಿಯೋ ಇದೆ.

ಕ್ಲೀನ್​ ಸ್ಲೇಟ್​ ಫಿಲ್ಮ್ಸ್​ ಹಾಗೂ ಕ್ರಿಆರ್ಜ್​ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗ್ಗಿರುವ ಈ ಚಿತ್ರ ಇದೇ ಮಾರ್ಚ್​ 2 ರಂದು ಬಿಡುಗಡೆಯಾಗಲಿದೆ. ಅನುಷ್ಕಾ ಅವರು ಟೀಸರ್ ನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವದರೊಡನೆ 'ಪರಿಯ ಜತೆ ಈ ಬಾರಿ ಹೋಲಿ ಆಚರಣೆ' ಎಂದೂ ಬರೆದುಕೊಂಡಿದ್ದಾರೆ. ಪರಿ ಚತ್ರವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶನ ಮಾಡಿದ್ದು ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ರಬ್ ನೆ ಬನಾದಿ ಜೋಡಿ', 'ಕಹಾನಿ'ಯಂತಹಾ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅನುಷ್ಕಾ ಅವರ 'ಪರಿ' ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

Edited By

Shruthi G

Reported By

Madhu shree

Comments