ಒಟ್ಟಿಗೆ ಒಂದೇ ಚಿತ್ರದಲ್ಲಿ ಜಗ್ಗೇಶ್-ಗಣೇಶ್ ಕಾಣಿಸಿಕೊಳ್ಳಲಿದ್ದಾರೆ
ಬಹುತಾರಾಗಣದ ಚಿತ್ರದಲ್ಲಿ ಗಣೇಶ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣೇಶ್ ಮತ್ತು ಜಗ್ಗೇಶ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಅವರು ಚಿತ್ರದ ಫೋಟೋಶೂಟ್ ನೋಡಿ ಉತ್ಸಾಹಿತರಾಗಿದ್ದು, ಅದನ್ನು ಅವರ ಪತ್ನಿ ಪರಿಮಳಾ ಅವರ ಸೋದರ ಸುಂದರ್ ರಾಮು ಮಾಡುತ್ತಿದ್ದಾರೆ.
ಅವರು ದಕ್ಷಿಣ ಭಾರತದ ಖ್ಯಾತ ಫ್ಯಾಶನ್ ಫೊಟೊಗ್ರಾಫರ್ ಗಳಲ್ಲಿ ಒಬ್ಬರು. ಅವರ ರಜನಿಕಾಂತ್ ಮತ್ತು ಸೂರ್ಯ ಅಂತಹ ಖ್ಯಾತ ನಟರಿಗೆ ಫೋಟೋಶೂಟ್ ಮಾಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಗ್ಗೇಶ್ ಗೆ ಅವರಿಗೆ ತಿಂಗಳಾಂತ್ಯದಲ್ಲಿ ಪೋಟೋಶೂಟ್ ಮಾಡಿಸಲಿದ್ದಾರೆ.ಈ ಸಿನಿಮಾ ತಮ್ಮ ವೃತ್ತಿಜೀವನದಲ್ಲಿ ಬಹಳ ಮುಖ್ಯವಾಗುತ್ತದೆ ಏಕೆಂದರೆ ನಿರ್ದೇಶಕ ಪಿ.ವಾಸು ಅವರ ಜೊತೆಗೆ ತಮ್ಮ ಒಡನಾಟ 25 ವರ್ಷಗಳ ಹಿಂದಿನದ್ದು ಎನ್ನುತ್ತಾರೆ. ವಾಸುರವರ ತಂದೆ ಪೀತಾಂಬರಂ ನಾಯರ್ ಖ್ಯಾತ ಮೇಕಪ್ ಮ್ಯಾನ್ ಆಗಿದ್ದರು. ಅವರು ಎನ್.ಟಿ.ರಾಮರಾವ್ ಮತ್ತು ಎಂಜಿ ರಾಮಚಂದ್ರನ್ ಅಂತವರಿಗೆ ಮೇಕಪ್ ಹಚ್ಚಿದವರು. ಅವರನ್ನು ಯಾವಾಗಲೂ ತಂದೆಯ ಸ್ಥಾನದಲ್ಲಿ ನೋಡುತ್ತಿದ್ದೆ ಮತ್ತು ನನ್ನ ಯಾವುದಾದರೂ ಚಿತ್ರಕ್ಕೆ ನೀವು ಮೇಕಪ್ ಮ್ಯಾನ್ ಆಗುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳುತ್ತಿದ್ದೆ. ಚೆನ್ನೈಯಿಂದ ಅವರು ಬಂದು ನನ್ನ ಸಾಹಸಿ ಸಿನಿಮಾದಲ್ಲಿ ನನಗೆ ಮೇಕಪ್ ಮಾಡಿದ್ದರು. ಆ ಸಂದರ್ಭದಲ್ಲಿ ನನಗೆ ಆಶೀರ್ವಾದ ಮಾಡಿ, ನಾನು ಕೆಲವರಿಗೆ ಮೇಕಪ್ ಮಾಡುತ್ತಿದ್ದು, ಅವರು ಇತಿಹಾಸ ನಿರ್ಮಿಸುತ್ತಾರೆ. ನೀನು ಕೂಡ ಒಂದು ದಿನ ದೊಡ್ಡ ಸ್ಟಾರ್ ಆಗುತ್ತೀಯಾ ಎಂದಿದ್ದರು ಎಂದು ಜಗ್ಗೇಶ್ ನೆನಪಿಸುತ್ತಾರೆ. ಜಗ್ಗೇಶ್ ಅವರ ನಂತರದ ಚಿತ್ರ ಭಂಡ ನಾನು ಗಂಡದಲ್ಲಿ ನಾನು ಮುಖ್ಯ ಪಾತ್ರ ಮಾಡಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ನಿರ್ಮಾಪಕ ಕೆ.ಸುರೇಶ್ ಅವರು ಜಗ್ಗೇಶ್ ಜೊತೆ ಕೆಲಸ ಮಾಡಲು ಇಚ್ಛಿಸಿ ಅವರ ಹೆಸರನ್ನು ನಿರ್ದೇಶಕರಿಗೆ ಸೂಚಿಸಿದ್ದಾರೆ. ಸುರೇಶ್ ಒಬ್ಬ ಬುದ್ದಿವಂತ ನಿರ್ಮಾಪಕರಾಗಿದ್ದಾರೆ ಎನ್ನುತ್ತಾರೆ ನಟ ಜಗ್ಗೇಶ್.
Comments