ಎಟಿಎಂ ಕಾರ್ಡ್ ಗಳ ಜೊತೆಗೆ ತಮ್ಮನೆಚ್ಚಿನ ನಟನನ್ನು ಜೋಪಾನವಾಗಿಡುತ್ತಿರುವ ಅಭಿಮಾನಿಗಳು



ಫ್ಯಾನ್ಸ್ ತಮ್ಮ ಸ್ಟಾರ್ ಗಳ ಮೇಲಿನ ಪ್ರೀತಿಯನ್ನ ತಮ್ಮದೇ ಆದ ಸ್ಟೈಲ್ ನಲ್ಲಿ ತೋರಿಸಿಕೊಳ್ಳುತ್ತಾರೆ. ಜೇಬಿನಲ್ಲಿ ಹಣವನ್ನ ಎಷ್ಟು ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೋ ಅದೇ ರೀತಿಯಲ್ಲಿ ಸ್ಟಾರ್ ಗಳನ್ನು ಸೇಫ್ ಆಗಿ ಇಟ್ಟುಕೊಳ್ಳುತ್ತೇವೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಈಗ ಕಾಲ ಬದಲಾಗಿದೆ. ಅಭಿಮಾನಿಗಳು ಬದಲಾಗಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಗಳ ಫೋಟೋಗಳನ್ನ ತಾವು ಬಳಸುವ ಎಟಿಎಂ ಕಾರ್ಡ್ ನಲ್ಲಿ ಹಾಕಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಈ ರೀತಿಯ ಕಾರ್ಡ್ ಡಿಸೈನ್ಸ್ ಮಾಡಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫೆವರೆಟ್ ಸ್ಟಾರ್ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನ ತಮ್ಮ ಎಟಿಎಂ ಕಾರ್ಡ್ ಮೇಲೆ ಪ್ರಿಂಟ್ ಹಾಕಿಸಿಕೊಂಡಿದ್ದಾರೆ.
Comments