ಯಶ್ ಗೆ ನವರಸ ನಾಯಕ ಜಗ್ಗೇಶ್ ಏನೆಂದು ಹಾರೈಸಿದ್ದಾರೆ ಗೊತ್ತಾ..?

ಹೊಸ ವರ್ಷದಂದು ಸುದೀಪ್ ಹಾಗೂ ಪ್ರಿಯಾ ದಂಪತಿಗೆ ಗಂಡು ಮಗುವಾಗಲಿ ಎಂದು ವಿಶ್ ಮಾಡಿದ್ದ ನವರಸ ನಾಯಕ ಜಗ್ಗೇಶ್ ಈಗ ಯಶ್ ಹಾಗೂ ರಾಧಿಕಾ ಪಂಡಿತ್‌ಗೆ ಕೂಡಾ ಅದೇ ರೀತಿ ವಿಶ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಯಶ್ ಜೊತೆಗಿನ ಫೋಟೋ ಅಪ್‌ಲೋಡ್ ಮಾಡಿ ಹುಟ್ಟುಹಬ್ಬದ ಶುಭಾಷಯ ಕೋರಿರುವ ಜಗ್ಗೇಶ್ "ನಲ್ಮೆಯ ಕಲಾ ಬಂಧುವಿಗೆ ಹುಟ್ಟುಹಬ್ಬದ ಶುಭಾಷಯಗಳು. ನಿಮ್ಮ ಆಕರ್ಷಕ ನಟನೆಯಿಂದ ಕನ್ನಡದ ಕಲಾತೇರು ಸುಗಮವಾಗಿ ಸಾಗುತ್ತಿದೆ. ಕಲೆಗೆ ನಾಡಿಗೆ ನಿಮ್ಮ ಸೇವೆ ಮುಂದುವರಿಯಲಿ. ರಾಯರ ದೆಯೆಯಿಂದ ಮನೆಯಲ್ಲಿ ತೊಟ್ಟಿಲು ಅನಾವರಣವಾಗಲಿ.. ಶುಭಮಸ್ತು:) ಎಂದು ಟ್ವೀಟ್ ಕೂಡಾ ಮಾಡಿದ್ದಾರೆ.
Comments