ರಜನಿಕಾಂತ್ ಯಾವ ಆಟಗಾರನ ಫ್ಯಾನ್ ಗೊತ್ತಾ ?
ಸೂಪರ್ ಸ್ಟಾರ್ ರಜನಿಕಾಂತ್ ಕೋಟ್ಯಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಆದ್ರೆ ರಜನಿ ಯಾರ ಅಭಿಮಾನಿ ಗೊತ್ತಾ? ಇತ್ತೀಚಿಗೆ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ತಾವು ಯಾವ ಕ್ರಿಕೆಟರ್ ಫ್ಯಾನ್ ಎಂಬುದನ್ನು ಹೇಳಿದ್ದಾರೆ.
ಕ್ರಿಕೆಟ್ ನೋಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್ ದೀರ್ಘಕಾಲದಿಂದ ನಾನು ಭಾರತ ತಂಡದ ಅಭಿಮಾನಿ ಎಂದ್ರು. ನಿಮಗೆ ಯಾವ ಕ್ರಿಕೆಟ್ ಆಟಗಾರ ಇಷ್ಟ ಎಂಬ ಪ್ರಶ್ನೆಗೆ ತಟ್ಟನೆ ಮಹೇಂದ್ರ ಸಿಂಗ್ ಧೋನಿ ಅಭಿಮಾನಿ ನಾನು ಎಂದಿದ್ದಾರೆ ರಜನಿಕಾಂತ್. ರಜನಿಕಾಂತ್ ಬಾಯಿಯಿಂದ ವಿರಾಟ್ ಕೊಹ್ಲಿ ಹೆಸರು ಬರುತ್ತೆ ಎಂದು ಜನರು ನಿರೀಕ್ಷಿಸಿದ್ದರು. ಆದ್ರೆ ಧೋನಿ ಹೆಸರು ಬರ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ ತಟ್ಟಿ ತಮ್ಮ ಖುಷಿ ವ್ಯಕ್ತಪಡಿಸಿದ್ರು. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವರ್ಷಗಳಿಂದ ಧೋನಿ ಯಶಸ್ವಿಯಾಗಿ ಮುನ್ನೆಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಜನಿಕಾಂತ್ ಚಿತ್ರಕ್ಕೆ ನಿರ್ದೇಶನ ಮಾಡ್ತಿರುವ ಶಂಕರ್ ಜಾಹೀರಾತು ಶೂಟಿಂಗ್ ನಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಹಾಗೆ ದಕ್ಷಿಣ ಭಾರತ ನಟರಲ್ಲಿ ರಜನಿಕಾಂತ್ ನನ್ನ ಫೆವರೆಟ್ ನಟ ಎಂದು ಈ ಹಿಂದೆ ಧೋನಿ ಹೇಳಿದ್ದರು.
Comments