ಭಯಾನಕ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ
ಬಾಹುಬಲಿ ಸರಣಿ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿರುವ ಅನುಷ್ಕಾ ಶೆಟ್ಟಿ ಮತ್ತೆ ಧಮಾಕಾ ಮಾಡಲು ಬಂದಿದ್ದಾಳೆ. ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ಭರ್ಜರಿಯಾಗಿ ಬಂದಿದ್ದು, ಅನುಷ್ಕಾ ಯಾವ ಪಾತ್ರ ಮಾಡಲೂ ಸಿದ್ಧ ಎಂಬುದು ಇದ್ರಿಂದ ಸಾಬೀತಾಗುತ್ತದೆ.
ಮೊದಲು ಐಎಎಸ್ ಅಧಿಕಾರಿ, ನಂತ್ರ ಜೈಲು ಆನಂತ್ರ ಪ್ರೇತಾತ್ಮ ಮೈಮೇಲೆ ಬರುವ ದೃಶ್ಯ ಟ್ರೈಲರ್ ನಲ್ಲಿದೆ. ಬಾಹುಬಲಿ-2 ನಂತ್ರ ಅನುಷ್ಕಾ ಶೆಟ್ಟಿ ಅಭಿನಯದ ಮೊದಲ ಚಿತ್ರ ಇದಾಗಿದೆ. ಜಿ. ಅಶೋಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಉನ್ನಿ ಮುಕುಂದನ್ ಮತ್ತು ಆದಿ ಪಿನಿಶೆಟ್ಟಿ ಮುಖ್ಯ ಪಾತ್ರದಲ್ಲಿದ್ದಾರೆ. ಮಲೆಯಾಳಂ ನಟ ಜಯರಾಮ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಬಿಡುಗಡೆಯಾಗಲಿದೆ.
Comments