ಜ.25ರಂದು ಪದ್ಮಾವತ್ ತೆರೆಗೆ

ಚಿತ್ರ ನಿರ್ಮಾಪಕ, ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ "ಪದ್ಮಾವತ್' ಇದೇ ಜನವರಿ 25ರಂದು ತೆರೆ ಕಾಣಲಿದೆ. ಅಕ್ಷಯ್ ಕುಮಾರ್ ಅವರ ಪ್ಯಾಡ್ಮ್ಯಾನ್ ದೊಂದಿಗೆ ಪದ್ಮಾವತ್ ಬಾಕ್ಸ್ ಆಫೀಸಿನಲ್ಲಿ ಸ್ಪರ್ಧಿಸಬೇಕಾಗಿದೆ.
ಪದ್ಮಾವತ್ ಬಿಡುಗಡೆ ದಿನಾಂಕವನ್ನು (ಜನವರಿ 25) ಬಾಲಿವುಡ್ ಚಿತ್ರ ವಿಮರ್ಶಕ ಮತ್ತು ಉದ್ಯಮ ವಿಶ್ಲೇಷಕ ತರಣ್ ಆದರ್ಶ್ ದೃಢೀಕರಿಸಿದ್ದಾರೆ. ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ "ಪದ್ಮಾವತಿ'ಗೆ ಯಾವುದೇ ಕಟ್ ಸೂಚಿಸದೆ ಕೇವಲ ಹೆಸರನ್ನು ಮಾತ್ರವೇ "ಪದ್ಮಾವತ್' ಎಂದು ಬದಲಿಸುವಂತ ಸೂಚಿಸಿ ಕೇಂದ್ರ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ನಟಿಸಿರುವ "ಪದ್ಮಾವತಿ' ಚಿತ್ರ 2017ರ ಡಿಸೆಂಬರ್ 1ರಂದು ತೆರೆ ಕಾಣುವುದಿತ್ತು. ಆದರೆ ರಾಜಸ್ಥಾನದ ರಾಜಪೂತ ಕರಣಿ ಸೇನೆ "ಇತಿಹಾಸ ತಿರುಚಲಾದ' ಈ ಚಿತ್ರಕ್ಕೆ ಬಹಿಷ್ಕಾರ ಹಾಕಿ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ನಾಂದಿ ಹಾಡಿದ ಕಾರಣ ಚಿತ್ರವು ತೀವ್ರ ವಿವಾದಕ್ಕೆ ಗುರಿಯಾಗಿತ್ತು.
Comments