ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ಉಪ್ಪಿಪುತ್ರಿ ಐಶ್ವರ್ಯ

ಐಶ್ವರ್ಯ ಉಪೇಂದ್ರ ಈ ಹಿಂದೆಯೇ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದರು. ಆ ಖಾತೆಯಲ್ಲಿ ತುಂಬ ಸಕ್ರೀಯರಾಗಿರುವ ಐಶ್ವರ್ಯ ಸದಾ ತನ್ನ ಡಬ್ ಸ್ಮಾಶ್ ಮತ್ತು ಪ್ರೀತಿಯ ಶ್ವಾನಗಳ ಫೋಟೋಗಳನ್ನು ಹಾಕುತ್ತಿದ್ದರು. ಇದೀಗ ಐಶ್ವರ್ಯ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ನಿನ್ನೆ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿರುವ ಅವರು ಸದ್ಯ 11 ಫಾಲೋವರ್ಸ್ ಹೊಂದಿದ್ದಾರೆ. ಉಪೇಂದ್ರ ಅವರ ಅಭಿಮಾನಿಗಳು ಅವರ ಮಗಳ ಟ್ವಿಟ್ಟರ್ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.
ಐಶ್ವರ್ಯ ಉಪೇಂದ್ರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಸದ್ಯ 7 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ತಂದೆ ಉಪೇಂದ್ರ ಮತ್ತು ತಾಯಿ ಪ್ರಿಯಾಂಕ ಉಪೇಂದ್ರ ಕೂಡ ಇದ್ದಾರೆ. ಇನ್ನು ಟ್ವಿಟ್ಟರ್ ಖಾತೆ ತೆರೆದ ನಂತರ ಮೊದಲು ತಮ್ಮ ಡಬ್ ಸ್ಮಾಶ್ ವಿಡಿಯೋವನ್ನು ಐಶ್ವರ್ಯ ಹಂಚಿಕೊಂಡಿದ್ದಾರೆ. ಅಂದಹಾಗೆ, ಐಶ್ವರ್ಯ ಉಪೇಂದ್ರ ಸದ್ಯ ಸಿನಿಮಾರಂಗಕ್ಕೆ ಕೂಡ ಎಂಟ್ರಿಯಾಗುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ನಟನೆಯ 'ಹೌರಾಬ್ರಿಡ್ಜ್' ಚಿತ್ರದ ಒಂದು ಪಾತ್ರದಲ್ಲಿ ಐಶ್ವರ್ಯ ಉಪೇಂದ್ರ ನಟಿಸುತ್ತಿದ್ದಾರೆ.
Comments