Report Abuse
Are you sure you want to report this news ? Please tell us why ?
ಕೆ.ಜಿ.ಎಫ್ ಟೀಸರ್ ಗೆ ಭರ್ಜರಿ ಪ್ರತಿಕ್ರಿಯೆ

08 Jan 2018 3:23 PM | Entertainment
443
Report
ಕನ್ನಡ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀ ಕ್ಷಿತ ಚಿತ್ರ ಕೆ.ಜಿ.ಎಫ್ ನ ಟೀಸರ್ ಬಿಡುಗಡೆ ಯಾಗಿದ್ದು, ಇದೀಗ ಸಾಮಾಜಿಕ ಜಾಲ ತಾಣ ಯೂಟೂಬ್’ನಲ್ಲಿ ಸದ್ದು ಮಾಡುತ್ತಿದೆ.
ಯಶ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಒಂದು ದಿನ ಮುಂಚಿತವಾಗಿ ಅಂದರೆ, ಭಾನುವಾರ ಹೊಂಬಾಳೆ ಫಿಲ್ಮ್ಸ್ ಟೀಸರ್ ಬಿಡುಗಡೆ ಮಾಡಿದ್ದು, 24ಗಂಟೆ ಯೊಳಗೆ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ‘ಉಗ್ರಂ’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರ ನಿರ್ದೇಶಿಸಿದ್ದು, ಹಿರಿಯ ನಟ ಅನಂತ್ ನಾಗ್ ಕೆ.ಜಿ.ಎಫ್ ಟೀಸರ್’ನಲ್ಲಿ ಯಶ್ ಪಾತ್ರವನ್ನು ಪರಿಚಯಿಸಿದ್ದಾರೆ.

Edited By
Shruthi G

Comments