ಹೈದರಾಬಾದ್ ಸ್ಟಾರ್ ಹೋಟೆಲ್ ಗಳ ಮೇಲೆ ಡಿ ಬಾಸ್ ಮುನಿಸಿಕೊಂಡಿರೋದೇಕೆ ?
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುವ 'ಕುರುಕ್ಷೇತ್ರ' ಚಿತ್ರದ ಕಲಾವಿದರು, ಸಂಜೆಯಾಗುತ್ತಿದ್ದಂತೆ ಸ್ಥಳೀಯ ಸ್ಟಾರ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರಂತೆ. ಈ ಮಧ್ಯೆ ಹೈದರಾಬಾದ್ ಸ್ಟಾರ್ ಹೋಟೆಲ್ ಗಳ ಮೇಲೆ ಡಿ ಬಾಸ್ ಮುನಿಸಿಕೊಂಡಿದ್ದಾರೆ. ಹೈದರಾಬಾದಿನ ಸ್ಟಾರ್ ಹೋಟೆಲ್ ನ ಸಿಬ್ಬಂಧಿಯವರು ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಗಳ ಕೂಡ ಮಾಡಿದ್ದಾರೆ.
ಈ ವಿಷ್ಯವನ್ನ ಬೇರೆ ಯಾರೂ ಹೇಳಿಲ್ಲ, ಖುದ್ದು ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ದರ್ಶನ್ ಅವರು ಹೋಟೆಲ್ ಅವರ ಜೊತೆ ಜಗಳ ಮಾಡಿರುವುದು ಯಾಕೆ ಎಂದು ಗೊತ್ತಾದ್ರೆ, ನೀವೆಲ್ಲಾ ಹೆಮ್ಮೆ ಪಡ್ತೀರಾ? ಸ್ಟಾರ್ ಹೋಟೆಲ್ ರೂಮ್‌ಗೆ ಹೋದರೆ ಅಲ್ಲಿ ಕನ್ನಡದ ಯಾವ ಚಾನೆಲ್‌ಗಳೂ ಬರುತ್ತಿರಲಿಲ್ಲ. ಬರೀ ತೆಲುಗು, ತಮಿಳು, ಹಿಂದಿ ಇತರೆ ಭಾಷೆ ಬರುತ್ತಿತ್ತು. ಕನ್ನಡ ಚಾನೆಲ್ ಬೇಕು ಅಂತ ಜಗಳ ಮಾಡಿದೆ. ಕನ್ನಡ ಚಾನೆಲ್ ಬರಲ್ಲ, ಅಂತ ಹೇಳುವ ಮೂಲಕ ತಾಳ್ಮೆ ಕೆಡಿಸಿದರು. ನಮ್ಮೂರಿಗೆ ಬನ್ನಿ, ನಿಮಗೆ ಯಾವ ಭಾಷೆಯ ಚಾನೆಲ್ ಬೇಕು ಸಿಗುತ್ತೆ, ಇಲ್ಲೇಕೆ ಕನ್ನಡ ಚಾನೆಲ್ ಸಿಗೋದಿಲ್ಲ ಅಂತ ಗಲಾಟೆ ಮಾಡಿ, ಹಠ ಮಾಡಿದ್ದರಿಂದ, ಕೊನೆಗೆ ಅವರೇ ಕನ್ನಡ ಚಾನೆಲ್ ಹಾಕಿಸಿಕೊಟ್ಟರು ಎಂದು ದರ್ಶನ್ ಹೇಳಿದ್ದಾರೆ.
ನಾಡಿನಿಂದ ಹೊರಗೆ ಹೋಗಿ ಶೂಟಿಂಗ್ ಮಾಡುತ್ತಿದ್ದರು, ಅಲ್ಲಿ ಕನ್ನಡ ಚಾನಲ್ ಗಾಗಿ ಜಗಳ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇದನ್ನ ಕರ್ನಾಟಕ ಅಭಿಮಾನಿಗಳು ಸ್ವಾಗತಿಸುತ್ತಾರೆ. ದರ್ಶನ್ ಅವರ ಈ ನಡೆಯನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಅಬ್ಬರ, ಪ್ರಚಾರ ಜೋರಾಗಿದೆ. ಇದಕ್ಕೆ ದರ್ಶನ್ ತಮ್ಮದೇ ಆದ ಸ್ಟೈಲ್ ನಲ್ಲಿ ಉತ್ತರಿಸಿದ್ದರು. ಅವರಿಗೆ ಅವರ ಇಂಡಸ್ಟ್ರಿ ಹೇಗೋ, ನಮಗೂ ಇಮ್ಮ ಇಂಡಸ್ಟ್ರಿ ಹಾಗೆ. ನಮ್ಮ ಚಿತ್ರಗಳು ನಮಗೆ ದೊಡ್ಡದು. ನಾವ್ಯಾಕೆ ಅವರಿಗೆ ಹೋಲಿಸಿಕೊಳ್ಳಬೇಕು. ನಮ್ಮಲ್ಲಿ ಎಲ್ಲ ರೀತಿಯ ಸಿನಿಮಾಗಳನ್ನ ಮಾಡ್ತೇವೆ ಎಂದು ದಾಸ ಸಂದರ್ಶನದಲ್ಲಿ ಹೇಳಿದ್ದರು.
Comments