ಮೌಂಟ್ ಎವರೆಸ್ಟ್ ಸುತ್ತಾಡಿಕೊಂಡು ಬಂದ ಕಿಚ್ಚನ ಪತ್ನಿ ಮತ್ತು ಮುದ್ದಿನ ಮಗಳು

ಸ್ಯಾಂಡಲ್‍ವುಡ್‍ನ ಸ್ಟಾರ್ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಪತ್ನಿ ಮತ್ತು ಮುದ್ದಿನ ಮಗಳು ಮೌಂಟ್ ಎವರೆಸ್ಟ್ ಸುತ್ತಾಡಿಕೊಂಡು ಬಂದಿದ್ದಾರೆ. ಮೌಂಟ್ ಎವರೆಸ್ಟ್ ನಲ್ಲಿ ಕಳೆದ ಕ್ಷಣಗಳು, ಖುಷಿ, ಎಲ್ಲಾ ಅನುಭವಗಳನ್ನು ಟ್ವೀಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. “ಹದ್ದಿನ ರೀತಿಯಲ್ಲಿ ಪರ್ವತವನ್ನ ಸುತ್ತಿದ ಹಾಗೆ ಅನುಭವ ಆಯ್ತು. ಭವ್ಯವಾದ ಮೌಂಟ್ ಎವೆರೆಸ್ಟ್ ನೋಡಿದ ಅನುಭವ ಎಂದಿಗೂ ಮರೆಯಲಾಗದು” ಎಂದು ಫೋಟೋಗಳನ್ನು ಹಾಕಿ ಟ್ವಿಟ್ ಮಾಡಿದ್ದಾರೆ.
ಸುದೀಪ್ ಮಲ್ಟಿ ಟ್ಯಾಲೆಂಟೆಡ್ ಆಗಿದ್ದು, ನಟನೆ, ನಿರ್ದೇಶನ, ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಹಾಡುವ ಸಾಮಥ್ರ್ಯ ಹೊಂದಿದಿದ್ದಾರೆ. ಅವರ ಪತ್ನಿ ಪ್ರಿಯಾ ಕೂಡ ಒಬ್ಬ ಗೃಹಿಣಿಯಾಗಿ ಮನೆಯನ್ನ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇವೆಂಟ್ ಕಂಪನಿ ಹಾಗೂ ನಿರ್ಮಾಣ ಸಂಸ್ಥೆಯನ್ನೂ ನೋಡಿಕೊಳ್ಳುತ್ತಿದ್ದಾರೆ. ಇವುಗಳ ನಡುವೆಯೂ ಬಿಡುವು ಮಾಡಿಕೊಂಡು ಪ್ರಿಯಾ ಸುದೀಪ್ ಇತ್ತೀಚಿಗೆ ಮೌಂಟ್ ಎವೆರೆಸ್ಟ್ ಪರ್ವತವನ್ನ ಹತ್ತಿ ಬಂದಿದ್ದಾರೆ. ಪ್ರಿಯಾ ಅವರು ಒಬ್ಬರೇ ಹೋಗದೇ ಜೊತೆಯಲ್ಲಿ ತಮ್ಮ ಮಗಳು ಸ್ವಾನಿಯನ್ನು ಕರೆದುಕೊಂಡು ಹೋಗಿದ್ದು, ಹೊಸ ವರ್ಷದ ನೆನಪಿಗಾಗಿ ಸುಮಧುರ ಕ್ಷಣಗಳನ್ನು ಕಳೆದು ಬಂದಿದ್ದಾರೆ.
Comments