ಖ್ಯಾತ ನಟ ಕಮಲ್ ಹಾಸನ್ ಮನೆಗೆ ಬಿಗಿ ಬಂದೋಬಸ್ತು

ಖ್ಯಾತ ನಟ ಕಮಲ್ ಹಾಸನ್ ಅವರ ನಿವಾಸದೆದುರು ಪ್ರತಿಭಟನೆ ನಡೆಸುವುದಾಗಿ ಕೆಲ ಸಂಘಟನೆಗಳು ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಚೆನ್ನೈನ ಆಳ್ವಾರ್ ಪೇಟ್ ನಲ್ಲಿರುವ ಅವರ ನಿವಾಸಕ್ಕೆ ಬಿಗಿ ಭದ್ರತೆಯನ್ನು ನೀಡಲಾಗಿದೆ. ಇತ್ತೀಚೆಗೆ ನಡೆದ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಪ್ರತಿನಿಧಿಸುತ್ತಿದ್ದ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಗೆಲುವಿಗೆ ಸಂಬಂಧಿಸಿದಂತೆ ಕಮಲ್ ಹಾಸನ್ ನೀಡಿದ ಪ್ರತಿಕ್ರಿಯೆ ಪ್ರತಿಭಟನೆಗೆ ಕಾರಣವೆನ್ನಲಾಗಿದೆ.
ತಮಿಳು ನಿಯತಕಾಲಿಕ 'ಆನಂದ ವಿಕಟನ್' ಗೆ ಬರೆದ ಲೇಖನದಲ್ಲಿ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶದ ಕುರಿತು ಕಮಲ್ ಪ್ರಸ್ತಾಪಿಸಿದ್ದು, ಆರ್.ಕೆ. ನಗರ ಕ್ಷೇತ್ರದಲ್ಲಿ ಗೆಲುವನ್ನು ಖರೀದಿಸಲಾಗಿದೆ ಎಂದು ಟೀಕಿಸಿದ್ದರಲ್ಲದೇ, ದಿನಕರನ್ ಗೆಲುವಿನ ಹಿಂದೆ ಹಣದ ಶಕ್ತಿ ಇದೆ ಎಂದು ಆರೋಪಿಸಿದ್ದರು. ಈ ಪ್ರತಿಕ್ರಿಯೆ ಮೂಲಕ ಕಮಲ್ ಹಾಸನ್ ಆರ್.ಕೆ. ನಗರ ಕ್ಷೇತ್ರದ ಮತದಾರರನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಕೆಲ ಸಂಘಟನೆಗಳು ಕಮಲ್ ನಿವಾಸದೆದುರು ಪ್ರತಿಭಟನೆಗೆ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
Comments