ದಿ ವಿಲನ್ ಸಿನಿಮಾದಲ್ಲಿ ಡೈನಾಮಿಕ್ ಸ್ಟಾರ್ ಎಂಟ್ರಿ ..!

ಹೌದು, ಕರುನಾಡ ಚಕ್ರವರ್ತಿ ಶಿವರಾಜಕುಮಾರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ದಿ ವಿಲನ್ ಸಿನಿಮಾದಲ್ಲಿ ಹಿರಿಯ ನಟ ದೇವರಾಜ ಅವರು ನಟಿಸಲು ಒಪ್ಪಿಕೊಂಡಿದ್ದಾರೆ. ಅಂದಹಾಗೆ ದೇವರಾಜ್ ಯಾವ ಪಾತ್ರವನ್ನು ಮಾಡುತ್ತಾರೆ ಎಂಬುದು ಇನ್ನೂ ಕುತೂಹಲವನ್ನುಂಟು ಮಾಡಿರುತ್ತದೆ. ದೇವರಾಜ ಜೊತೆಗೆ ತಮಿಳಿನ ಖ್ಯಾತ ಪೋಷಕ ನಟಿ ಸರಣ್ ಕೂಡ ನಟಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ದಿ ವಿಲನ್. ಈಗ ಈ ಸಿನಿಮಾದ ಕುರಿತು ಹೊಸ ಸುದ್ದಿಯೊಂದು ಹೊರ ಬಿದ್ದಿರುತ್ತದೆ. ಈಗ ಈ ಸಿನಿಮಾದಲ್ಲಿ ಮತ್ತೊಬ್ಬ ಹಿರಿಯ ನಟ ನಟಿಸುತ್ತಿದ್ದಾರೆ. ಅಂದಹಾಗೆ ಆ ನಟ ಯಾರು ಗೊತ್ತಾ..? ದಿ ವಿಲನ್ ಸಿನಿಮಾದಲ್ಲಿ ನಾಯಕಿಯಾಗಿ ಬ್ರಿಟಿಷ್ ಮಾಡೆಲ್ ಕಂ. ಬಾಲಿವುಡ್ ನಟಿ ಎಮಿ ಜಾಕ್ಸನ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ.
Comments