ಪದ್ಮಾವತಿ ಬಿಡುಗಡೆಗೆ ದಿನಾಂಕ ಫಿಕ್ಸ್
ಸಂಜಯ್ ಲೀಲಾ ಬನ್ಸಾಲಿ ಬಹು ವಿವಾದಿತ ಚಿತ್ರ ಪದ್ಮಾವತಿ ಬಿಡುಗಡೆಗೆ ಹೊಸ ದಿನಾಂಕ ನಿಗದಿಯಾಗಿದೆ. ಚಿತ್ರವನ್ನು ಫೆಬ್ರವರಿ 9ರಂದು ಥಿಯೇಟರ್ ನಲ್ಲಿ ನೋಡಬಹುದು ಎನ್ನಲಾಗ್ತಿದೆ. ಆದ್ರೆ ಅಧಿಕೃತವಾಗಿ ಚಿತ್ರಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಹಾಗೆ ಚಿತ್ರದ ಬಗ್ಗೆ ಇರುವ ಅನೇಕ ಪ್ರಶ್ನೆಗಳಿಗೆ ಈಗಲೂ ಉತ್ತರ ಸಿಕ್ಕಿಲ್ಲ.
ಪದ್ಮಾವತಿ ಬದಲು ಪದ್ಮಾವತ ಎಂದು ಚಿತ್ರಕ್ಕೆ ಹೆಸರಿಡಲು ವಿಮರ್ಶಕರು ಸೂಚನೆ ನೀಡಿದ್ದರು. ಇದಕ್ಕೆ ಸೆನ್ಸಾರ್ ಬೋರ್ಡ್ ಒಪ್ಪಿಗೆ ಕೂಡ ನೀಡಿದೆ. ಸಂಜಯ್ ಲೀಲಾ ಬನ್ಸಾಲಿ ಕೂಡ ಯಸ್ ಎಂದಿದ್ದಾರೆ ಎನ್ನಲಾಗ್ತಿದೆ. ಆದ್ರೆ ಚಿತ್ರದ ಹೆಸರು ಬದಲಾಗುತ್ತಾ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಜನವರಿ 26ರಂದು ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗ್ತಾ ಇತ್ತು. ಸಂಜಯ್ ಲೀಲಾ ಬನ್ಸಾಲಿ ಈ ಬಗ್ಗೆ ಚಿತ್ರ ತಂಡಕ್ಕೆ ಸಂದೇಶ ರವಾನೆ ಮಾಡಿದ್ದಾರೆ ಎಂಬ ಸುದ್ದಿಯಿದೆ.ಆದ್ರೆ ಚಿತ್ರ ಜನವರಿ 26ರಂದು ತೆರೆಗೆ ಬಂದಲ್ಲಿ ಅಕ್ಷಯ್ ಕುಮಾರ್ ಅಭಿನಯದ ಪೈಡ್ಮ್ಯಾನ್ ಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಫೆಬ್ರವರಿ 9ರಂದು ತೆರೆಗೆ ಬಂದ್ರೆ ಪರಿ ಚಿತ್ರಕ್ಕೆ ಹೊಡೆತ ಬೀಳಲಿದೆ. ಇದು ಆಯಾ ಚಿತ್ರದ ನಿರ್ದೇಶಕರ ತಲೆ ನೋವಿಗೆ ಕಾರಣವಾಗಿದೆ. ಅಳೆದು ತೂಗಿ ಸಂಜಯ್ ಯಾವಾಗ ಚಿತ್ರ ಬಿಡುಗಡೆ ಮಾಡ್ತಾರೆ ಹಾಗೆ ಯಾವೆಲ್ಲ ಬದಲಾವಣೆ ಮಾಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Comments