ದರ್ಶನ್ ಕುರುಕ್ಷೇತ್ರ ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳು ಹೇಳಿದ್ದೇನು?
ಕನ್ನಡ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಇಡೀ ಚಿತ್ರರಂಗವೇ ಕಾದಿರುವ ಸಿನಿಮಾ ಕುರುಕ್ಷೇತ್ರ. ಈ ಹಿಂದೆ ಕನ್ನಡ ಸಿನಿಮಾರಂಗದಲ್ಲಿ ಯಾರು ಮಾಡಿರದ ಪ್ರಯತ್ನಕ್ಕೆ ನಿರ್ಮಾಪಕ ಮುಂದಾಗಿದ್ದು ಚಿತ್ರೀಕರಣವನ್ನೂ ಮುಗಿಸುವ ಹಂತಕ್ಕೆ ತಲುಪಿದ್ದಾರೆ.
ಈ ರೀತಿಯ ಪ್ರಯತ್ನ ಮಾಡಲು ಮುಂದಾಗಿರುವುದಕ್ಕೆ ಚಿತ್ರತಂಡಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. . ಚಿತ್ರೀಕರಣ ಮುಗಿಸುವ ದಿನಾಂಕದ ಜೊತೆಗೆ ರಿಲೀಸ್ ಡೇಟ್ ಅನ್ನು ತಿಳಿಸಿರುವ ಚಿತ್ರತಂಡ ಮಾರ್ಚ್ ನಲ್ಲಿ ಸಿನಿಮಾವನ್ನ ತೆರೆಗೆ ತರುತ್ತಿದ್ದಾರೆ.ಕುರುಕ್ಷೇತ್ರ ಸಿನಿಮಾವನ್ನ ದರ್ಶನ್ ಅಭಿಮಾನಿಗಳು ಮತ್ತು ಕನ್ನಡ ಸಿನಿ ರಸಿಕರ ಜೊತೆಯಲ್ಲಿ ಬೇರೆ ಸ್ಟಾರ್ ಗಳ ಅಭಿಮಾನಿಗಳು ಚಿತ್ರವನ್ನ ಹಾಗೂ ದರ್ಶನ್ ಗೆಟಪ್ ಅನ್ನು ಇಷ್ಟ ಪಟ್ಟಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಈ ಬಗ್ಗೆ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ದರ್ಶನ್ ಕುರುಕ್ಷೇತ್ರ ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳು ಹೇಳಿದ್ದೇನು?
ಕುರುಕ್ಷೇತ್ರ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಫೋಟೋಗಳು ಬಿಡುಗಡೆ ಆಗುತ್ತಿದ್ದ ಹಾಗೆಯೇ ಎಲ್ಲೆಡೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. "ದರ್ಶನ್ ಅವರು ದುರ್ಯೋಧನನ ಪಾತ್ರಕ್ಕೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ" ಎಂದು ಪುನೀತ್ ಅಭಿಮಾನಿಗಳು ತಿಳಿಸಿದ್ದಾರೆ.ಕುರುಕ್ಷೇತ್ರ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಫೋಟೋಗಳು ಬಿಡುಗಡೆ ಆಗುತ್ತಿದ್ದ ಹಾಗೆಯೇ ಎಲ್ಲೆಡೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. "ದರ್ಶನ್ ಅವರು ದುರ್ಯೋಧನನ ಪಾತ್ರಕ್ಕೆ ತುಂಬಾ ಚೆನ್ನಾಗಿ ಸೂಟ್ ಆಗುತ್ತಾರೆ" ಎಂದು ಪುನೀತ್ ಅಭಿಮಾನಿಗಳು ತಿಳಿಸಿದ್ದಾರೆ.ಫೆಬ್ರವರಿಯಲ್ಲಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಮಾರ್ಚ್ ಮೊದಲ ವಾರದಲ್ಲಿ ಕುರುಕ್ಷೇತ್ರ ಚಿತ್ರ ಪ್ರೇಕ್ಷಕರ ಎದುರು ಬರಲಿದೆ. ಕುರುಕ್ಷೇತ್ರ ಒಬ್ಬ ನಟನ ಅಭಿಮಾನಿಗಳಿಗಷ್ಟೇ ಸೀಮಿತವಾಗದೆ ಕನ್ನಡ ಸಿನಿಪ್ರಿಯರ ಚಿತ್ರವಾಗಿರುವುದು ಖುಷಿಯ ವಿಚಾರ.
Comments