ಕನ್ನಡದ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿರುವ ಧನುಷ್

ಹೌದು, ನಟ ಧನುಷ್ ಅವರು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವನ್ನು ನಿರ್ಮಿಸಲು ಮುಂದಾಗಿದ್ದಾರೆ. ಅದು ಅಲ್ಲದೆ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ರಿಷಿ ಅವರು ಆಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಅಭಿನಯದಿಂದ ಬೆರಗಾಗಿ ಈ ನಟನೊಂದಿಗೆ ಹೊಸ ಸಿನಿಮಾ ಮಾಡಲು ಧನುಷ್ ಮುಂದಾಗಿರುತ್ತಾರೆ.
ಕಾಲಿವುಡ್ ನಟ ಧನುಷ್ ಅವರು ಈಗ ಕನ್ನಡದ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಧನುಷ್ ಅವರು ಬಹಳಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರು ವಂಡರ್ ಬಾರ್ ಸಂಸ್ಥೆಯಡಿಯಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ನಿರ್ಮಿಸಲಿರುವ ಸಿನಿಮಾದ ನಾಯಕ ಯಾರು ಗೊತ್ತಾ ..? ಆಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ಸಹ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧನುಷ್ ಅವರು ಅಂಬಿ ನಿಂಗೆ ವಯಸ್ಸಾಯಿತೋ ಸಿನಿಮಾದ ತಮಿಳಿನಲ್ಲಿ ನಟಿಸುತ್ತಿದ್ದಾರೆ, ಹಾಗೆಯೇ ನಿರ್ಮಿಸುತ್ತಿದ್ದಾರೆ. ಒಟ್ಟಿನಲ್ಲಿ ಧನುಷ್ ಅವರು ಕನ್ನಡ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ.
Comments