20 ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ರಾಜರಥ ಟ್ರೈಲರ್
ರಂಗಿತರಂಗ ಚಿತ್ರದ ಯಶಸ್ಸಿನ ನಂತರ, ಬಂಡಾರಿ ಬ್ರದರ್ಸ್ ಅವರ ನಿರ್ಮಾಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷಿತ ರಾಜರಥ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದೆ. ಟ್ರೈಲರ್ ಹೊರ ಬಂದ ಕ್ಷಣದಿಂದ ಅಭಿಮಾನಿಗಳ ಮನಸೂರೆಗೊಂಡು ಈಗಾಗಲೇ 20 ಲಕ್ಷಕ್ಕೂ ಅಧಿಕ ಮಂದಿಯ ವೀಕ್ಷಣೆಗೊಳಪಟ್ಟಿದೆ.
ಜನವರಿ 26 ರಂದು ಕನ್ನಡ ಹಾಗೂ ತೆಲಗು ಭಾಷೆಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಕುರಿತಂತೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತದ್ದು, ಈಗಾಗಲೇ ಪುನೀತ್ ರಾಜ್ ಕುಮಾರ ಅವರು ಧ್ವನಿ ನೀಡಿರುವ ಚಿತ್ರದ ಟ್ರೈಲರ್ ಸಹ ಗಮನ ಸೆಳೆದಿದೆ. ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆ ಕಾಣಲಿರುವ ಈ ಚಿತ್ರಕ್ಕೆ ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಅವರು ತೆಲಗು ಟ್ರೈಲರ್ ಗೆ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಆವಂತಿಕಾ ಶೆಟ್ಟಿ ನಾಯಕಿಯಾಗಿದ್ದು, ನಿರ್ದೇಶಕ ಅನೂಪ್ ಬಂಡಾರಿ ಸೇರಿದಂತೆ ರವಿಶಂಕರ್, ತೆಲಗು ನಟ ಅರ್ಯ ಅವರು ಅಭಿನಯಿಸಿದ್ದಾರೆ.
Comments