ಕಿಚ್ಚ ಸುದೀಪ್ ದಂಪತಿಗಳ ಬಾಳಲ್ಲಿ ಜ್ಯೂನಿಯರ್ ಕಿಚ್ಚನ ಎಂಟ್ರಿ ಅಗಲಿದ್ಯಾ..!!

ಸದ್ಯಕ್ಕೆ ಕನ್ನಡದಲ್ಲಿ ಸಖತ್ ಬ್ಯುಸಿ ಇರುವ ನಟ ಅಂದ್ರೆ ಅದು ಕಿಚ್ಚ ಸುದೀಪ್. ಒಂದು ಕಡೆ ನಟನೆ, ಪ್ರೊಡೆಕ್ಷನ್ ಹೌಸ್, ಚಿತ್ರಗಳ ನಿರ್ಮಾಣ, ಕ್ರಿಕೆಟ್, ಬಿಗ್ ಬಾಸ್, ಬೇರೆ ಭಾಷೆಯ ಚಿತ್ರಗಳು.. ಹಾಲಿವುಡ್ ವರೆಗೂ ಕಿಚ್ಚ ಫುಲ್ ಬ್ಯೂಸಿಯಾಗಿದ್ದಾರೆ. ಈ ನಡುವೆ ತನ್ನ ಕುಟುಂಬಕ್ಕೆ ಟೈಮ್ ಕೊಡ್ತಾರೆ ಕಿಚ್ಚ.. ಈ ಹಿಂದಷ್ಟೇ ವಿಚ್ಛೇದನಕ್ಕೆ ಅರ್ಜಿ ಹಾಕಿ ಆನಂತರ ರಾಜಿ ಮಾಡಿಕೊಂಡು ಈಗ ಸುಖ ಸಂಸಾರ ನಡೆಸುತ್ತಿದ್ದಾರೆ ಕಿಚ್ಚ ಸುದೀಪ್ ದಂಪತಿಗಳು.
ಈ ದಂಪತಿಯ ಮುದ್ದಿನ ಕುಡಿ ಅವರ ಮಗಳು.. ಕಿಚ್ಚ ಸುದೀಪ್ ಅವರಿಗೆ ಈ ಮಗಳೆಂದ್ರೆ ಪ್ರಾಣ. ಒಂದು ರೀತಿ ಈ ಇಬ್ಬರು ಜೊತೆಯಾಗಿ ಮತ್ತೆ ಸಂಸಾರ ನಡೆಸಲು ಮಗಳೆ ಮುಖ್ಯ ಕಾರಣವಾಗಿದ್ದಾರೆ. ಜೊತೆಗೆ ಈ ಕುಟುಂಬದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗ್ತಾನೆ ಇರುತ್ತೆ..ಇಂತಹದ್ದೆ ಫೋಟೊ ಒಂದು ನಟ ಜಗ್ಗೇಶ್ ಅವರ ಕಣ್ಣಿಗೆ ಬಿದ್ದಿದೆ. ಈ ದಂಪತಿಯ ಫೋಟೊ ನೋಡಿದ್ದೆ ತಡ ಪ್ರೀತಿಯಿಂದ “Lovely pic.ಗಂಡು ಮಗು ಪ್ರಾಪ್ತಿರಸ್ತು:) ಕರುನಾಡು ಕಾಯುತ್ತಿದೆ ಜೂ.ಕಿಚ್ಚನಿಗೆ”. ಹೀಗೆ ಟ್ವಿಟ್ ಮಾಡಿದ್ದಾರೆ. ಇದಕ್ಕೆ ಕಿಚ್ಚನ ಅಭಿಮಾನಿಗಳಿಂದ ಹಿಡಿದು ಎಲ್ಲರು ಸಂತೋಷವನ್ನ ವ್ಯಕ್ತ ಪಡೆಸಿದ್ದಾರೆ, ಹಾರೈಸಿದ್ದಾರೆ ಇನ್ನೂ ಗಂಡು ಮಗು ಆಗಲಿ ಎಂದು ಹೇಳಿರುವುದಕ್ಕೆ ನೀವ್ಯಾಕೆ ಹೀಗೆ ಗಂಡು ಹೆಣ್ಣು ಅಂತ ತಾರತಮ್ಯ ಮಾಡ್ತೀರಾ ಅಂತ ಜಗ್ಗೇಶ್ ಅವರಿಗೆ ಕೇಳಿದವರು ಇದ್ದಾರೆ. ಇದಕ್ಕೆ ಜಗ್ಗೇಶ್ ಅವರು ಈಗಾಗ್ಲೇ ಸುದೀಪ್ ಅವರಿಗೆ ಹೆಣ್ಣು ಮಗುವಿದ್ದು, ಗಂಡು ಮಗುವಾಗ್ಲಿ ಅಂತ ಹೇಳಿದ್ದೇನೆ ಅಷ್ಟೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಅಂದಿದ್ದಾರೆ. ಟ್ಟಿನಲ್ಲಿ ಜಗ್ಗೇಶ್ ಅವರ ಈ ಶುಭಕಾಮನೆ ನಿಜವಾಗಲಿ ಅನ್ನೋದು ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಅಭಿಲಾಷೆಯೂ ಆಗಿರ ಬಹುದು.
Comments