ರಿಸೆಪ್ಷನ್ ನಲ್ಲಿ ರಣವೀರ್ ಹಾಡು ಕೇಳಿ ಕೊಹ್ಲಿ ಸಿಟ್ಟಾಗಿದ್ದೇಕೆ?

ಅನುಷ್ಕಾ ಶರ್ಮಾ ಮಾಜಿ ಪ್ರಿಯಕರ ರಣವೀರ್ ಸಿಂಗ್ ನಟಿಸಿರುವ ಚಿತ್ರದ ಹಾಡನ್ನು ಕೇಳಲೂ ವಿರಾಟ್ ಗೆ ಮನಸ್ಸಿಲ್ಲ. ಯಸ್, ಅನುಷ್ಕಾ ಶರ್ಮಾ ಮಾಜಿ ಪ್ರಿಯಕರ ರಣವೀರ್ ಸಿಂಗ್ ನಟನೆಯ ಹಾಡೊಂದು ವಿರಾಟ್ ಮದುವೆ ಸಮಾರಂಭದಲ್ಲಿ ಕೇಳಿ ಬಂತು. ತಕ್ಷಣ ಅಸಮಾಧಾನ ವ್ಯಕ್ತಪಡಿಸಿದ ಕೊಹ್ಲಿ ಹಾಡು ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ ಮದುವೆ ಸಮಾರಂಭದಲ್ಲಿ ರಣವೀರ್ ಅಭಿನಯದ ಯಾವುದೇ ಹಾಡನ್ನು ಹಾಕಬೇಡಿ ಎಂದು ಡಿಜೆಗೆ ಹೇಳಿದ್ದರಂತೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾ ಕೈ ಹಿಡಿದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನವ ವಧುವರರು ಎಂಜಾಯ್ ಮಾಡ್ತಿದ್ದಾರೆ. ಅನುಷ್ಕಾಳನ್ನು ಕೊಹ್ಲಿ ಎಷ್ಟು ಪ್ರೀತಿ ಮಾಡ್ತಾರೋ ಅಷ್ಟೇ ಪೊಸೆಸ್ಸಿವ್ ಕೂಡ ಹೌದು. ರಣವೀರ್ ಜೊತೆ ಬ್ರೇಕ್ ಅಪ್ ಆದ್ಮೇಲೂ ಅನುಷ್ಕಾ, ರಣವೀರ್ ಜೊತೆ ನಟಿಸಿದ್ದಾಳೆ. ಬ್ಯಾಂಡ್ ಬಾಜಾ ಬಾರಾತ್ ನಲ್ಲಿ ರಣವೀರ್ ಜೊತೆ ನಟಿಸುತ್ತಿದ್ದ ವೇಳೆ ಅನುಷ್ಕಾ, ಕೊಹ್ಲಿ ಪ್ರೀತಿಗೆ ಬಿದ್ದಿದ್ದಳು. ಮದುವೆ ಸಮಾರಂಭದಲ್ಲಿ ಇದೇ ಚಿತ್ರದ ಹಾಡನ್ನು ಹಾಕಲಾಗಿತ್ತು. ಇಷ್ಟೇ ಅಲ್ಲ ರಣವೀರ್ ಮುಂಬೈ ಹಾಗೂ ದೆಹಲಿಯಲ್ಲಿ ನಡೆದ ಕೊಹ್ಲಿ ರಿಸೆಪ್ಷನ್ ನಲ್ಲಿ ಕಾಣಿಸಿಕೊಳ್ಳಲಿಲ್ಲ.
Comments