ಬಾಲಿವುಡ್ ಗೆ ಎಂಟ್ರಿ ಕೊಡುವ ಬಗ್ಗೆ ತೆರೆ ಎಳೆದ ಪ್ರಭಾಸ್
ಬಾಹುಬಲಿ' ಸರಣಿ ಚಿತ್ರಗಳ ಯಶಸ್ಸಿನ ನಂತರ ದಕ್ಷಿಣ ಭಾರತದ ಖ್ಯಾತ ನಟ ಪ್ರಭಾಸ್ ಅವರು ದೇಶಾದ್ಯಂತ ಚಿತ್ರ ನಿರ್ಮಾಪಕರ ಗಮನ ಸೆಳೆದಿದ್ದು, ಈಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವುದು ಪಕ್ಕಾ ಆಗಿದೆ. ಪ್ರಭಾಸ್ ತಮ್ಮ ಬಹು ನಿರೀಕ್ಷಿತ ಆಕ್ಷನ್ ಚಿತ್ರ ಸಾಹೋ ನಂತರ ಬಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ನಾಯಕರಾಗುತ್ತಾರೆ ಎನ್ನುವ ವದಂತಿಗೆ ಈಗ ಸ್ವತಃ ಪ್ರಭಾಸ್ ಅವರೇ ತೆರೆ ಎಳೆದಿದ್ದು, ತಾವು ಹಿಂದಿ ಸಿನಿಮಾದಲ್ಲಿ ಅಭಿನಯಿಸುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬಾಲಿವುಡ್ ನ ವೆಬ್ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ, ಮೂರು ವರ್ಷಗಳ ಹಿಂದೆಯೇ ಬಾಲಿವುಡ್ ಚಿತ್ರವೊಂದಕ್ಕೆ ನಾನು ಸಹಿ ಹಾಕಿದ್ದು, ಅದು ಪ್ರೇಮ ಕಥೆ ಆಧಾರಿತ ಚಿತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಬಾಲಿವುಡ್ನಿಂದ ಅನೇಕ ಆಫರ್ಗಳು ಬರುತ್ತಿವೆ. ನಾನು ಈಗಾಗಲೇ ಕಥೆಯೊಂದಕ್ಕೆ ಓಕೆ ಎಂದಿರುವ ಕಾರಣ ಆ ಕಥೆ ಮೂಲಕವೇ ಬಾಲಿವುಡ್ಗೆ ಎಂಟ್ರಿ ಕೊಡುತ್ತೇನೆ. 'ಸಾಹೋ' ಚಿತ್ರದ ನಂತರದಲ್ಲಿ ಆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತೇನೆ'ಎಂದಿದ್ದಾರೆ. ಟಾಲಿವುಡ್ ಮಾದರಿಯಲ್ಲೇ ಬಾಲಿವುಡ್ನಲ್ಲೂ ಹೆಸರು ಮಾಡುವ ಆಸೆ ಹೊಂದಿರುವ ಪ್ರಭಾಸ್, ಮುಂದೊಂದು ದಿನ ತಾನು ಬಾಲಿವುಡ್ನ 'ಸೂಪರ್ ಸ್ಟಾರ್' ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರಂತೆ. ಪ್ರಭಾಸ್ ಅವರ ಮೊದಲ ಬಾಲಿವುಡ್ ಚಿತ್ರಕ್ಕೆ ಯಾರು ಆಕ್ಷನ್-ಕಟ್ ಹೇಳುತ್ತಿದ್ದಾರೆ? ನಾಯಕಿ ಯಾರು ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ.
Comments