ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ನಿವೇದಿತಾ ಗೌಡ

03 Jan 2018 9:45 AM | Entertainment
412 Report

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ನೀಡಿರುವ ಟಾಸ್ಕಗಳನ್ನು ಮನಸ್ಪೂರ್ತಿಯಾಗಿ ಮಾಡುತ್ತಿದ್ದು, ಸದಸ್ಯರೆಲ್ಲರೂ ಕುಳಿತು ಮಾತನಾಡುತ್ತಿರುವಾಗ ಮಧ್ಯದಲ್ಲಿ ಮಾತಿನ ಚಕಾಮಕಿ ನಡೆದು ನಿವೇದಿತಾ ಗೌಡ ಬಿಕ್ಕಿ ಬಿಕ್ಕಿಅತ್ತಿರುವ ಘಟನೆ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದಿದೆ. 

ಈ ವಾರ ಮನೆಯಿಂದ ಹೊರ ಹೋಗುವುದು ತಾನೆ ಎಂದು ಜೆಕೆ ಅವರು ಹೇಳಿದಾಗ, ಮಧ್ಯದಲ್ಲಿ ನಿವೇದಿತಾ ತಾನು ಟಾಪ್ 5 ರಲ್ಲಿ ಒಬ್ಬಳಾಗಿರುತ್ತೇನೆ ಎಂದು ಹೇಳಿದ್ದು, ಸದಸ್ಯರಲ್ಲಿ ಬೇಸರ ಮೂಡಿಸಿತ್ತು, ಕೆಲವು ಸದಸ್ಯರು ಅದನ್ನು ಆಕ್ಷೇಪಿಸಿದರು. ಆಗ ನಿವೇದಿತಾ ತಾನು ತಮಾಷೆ ಮಾಡಿರುವುದಾಗಿ ಎಷ್ಟೇ ಹೇಳಿದರು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆಗ ಬೇಸರಗೊಂಡ ನಿವೇದಿತಾ ಅಳುತ್ತಾ ಯಾರು ತನ್ನ ಬಳಿ ಮಾತನಾಡಬೇಡಿ ಎಂದಾಗ ಎಲ್ಲರೂ ಆಕೆಯ ಬಳಿ ಮಾತು ನಿಲ್ಲಿಸಿದರು. ಇದರಿಂದ ನಿವೇದಿತಾ ಇನ್ನಷ್ಟು ಬೇಸರಗೊಂಡು ಬಿಕಿಬಿಕಿ ಅತ್ತರು. ಕೊನೆಗೆ ಸಮೀರ್ ಆಚಾರ್ಯ ಹಾಗು ರಿಯಾಜ್ ಅವರು ನಿವೇದಿತಾರನ್ನು ಸಮಾಧಾನ ಪಡಿಸಿದರು.

Edited By

venki swamy

Reported By

Madhu shree

Comments