ಚಮಕ್ ಸಿನಿಮಾಗೆ ನಿರೀಕ್ಷೆಗೂ ಮೀರಿ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಜೋಡಿಯಲ್ಲಿ ಮೂಡಿ ಬಂದಿರುವ ಸಿನಿಮಾ ಚಮಕ್. ಚಿತ್ರದ ಟೀಸರ್ ನಿಂದ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಚಮಕ್ ಸಿನಿಮಾ ಹುಟ್ಟು ಹಾಕಿತ್ತು. ಆ ನಿರೀಕ್ಷೆಗಳನ್ನು ಮೀರಿ ಚಮಕ್ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಜೊತೆಗೆ ಭಾರೀ ಗಳಿಕೆಯನ್ನು ಮಾಡುತ್ತಿದೆ.
ಹೌದು, ಗಣೇಶ್ ಹಾಗೂ ರಶ್ಮಿಕಾ ಅವರು ಇದೇ ಮೊದಲ ಬಾರಿಗೆ ಜೋಡಿಯಾಗಿ ಚಮಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಕೆಲವು ಚಿತ್ರಮಂದಿರಗಳಲ್ಲಿ ಚಮಕ್ ಹೌಸಫುಲ್ ಪ್ರದರ್ಶನಗೊಳ್ಳುತ್ತಿದೆ. ಹೀಗಾಗಿ ಚಮಕ್ ಸಿನಿಮಾ ಸಾಕಷ್ಟು ಕಮಾಯಿ ಮಾಡುತ್ತಿದೆ. ಚಮಕ್ ಸಿನಿಮಾದ ಮೂಲಕ ಮತ್ತೆ ಸಕ್ಸಸ್ ಹಾದಿಯತ್ತ ಗಣೇಶ್ ನಡೆದಿದ್ದಾರೆ. ಚಮಕ್ ಸಿನಿಮಾ ಮುಂಗಾರುಮಳೆ ಸಿನಿಮಾ ಬಿಡುಗಡೆಯಾದ ದಿನದಂದು ಬಿಡುಗಡೆಯಾಗಿದೆ. ಅಲ್ಲದೆ ಈ ಸಿನಿಮಾದಲ್ಲಿ ಗಣೇಶ ಅವರ ಮಗಳು ಚಾರಿತ್ರ್ಯ ಕೂಡ ಮಗಳ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಗಣೇಶ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಮಕ್ ಸಿನಿಮಾ ಸುಮಾರು 6 ರಿಂದ 7 ಕೋಟಿ ಗಳಿಕೆ ಮಾಡಿ ಮುನ್ನುಗುತ್ತಿದೆ. ಹಳೆಯ ದಾಖಲೆಗಳನ್ನು ಮುರಿದು ಹಾಕಲಿದೆ ಎಂದು ಸಿನಿತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಮಕ್ ಸಿನಿಮಾವನ್ನು ಸುನಿ ನಿರ್ದೇಶಿಸಿದ್ದಾರೆ. ಸ್ಯಾಂಡಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
Comments