ಅಲ್ಲು ಅರ್ಜುನ್ ಆತಂಕ ದೂರ ಮಾಡಿದ ರಜನಿ
ಕೊನೆಗೂ ಬಿಗ್ ಸಸ್ಪೆನ್ಸ್ ಗೆ ಫುಲ್ ಸ್ಟಾಪ್ ಬಿದ್ದಿದೆ. ತೆಲುಗು ಸ್ಟಾರ್ ಗಳೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮಿಳರ ಹೊಸ ವರ್ಷವಾದ ಏಪ್ರಿಲ್ 14ರಂದು ಬಹುನಿರೀಕ್ಷಿತ 2.0 ಚಿತ್ರ ರಿಲೀಸ್ ಆಗಲಿದೆ. ಸಿಜಿ ಕೆಲಸದಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗ್ತಿದೆ.
ಅದು ಮುಗಿದ ಬಳಿಕ ಎ.ಆರ್. ರೆಹಮಾನ್ ರಿರೆಕಾರ್ಡಿಂಗ್ ಮಾಡಲಿದ್ದಾರೆ. ಹಾಗಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಜನವರಿ 26ರಿಂದ ಏಪ್ರಿಲ್ 14ಕ್ಕೆ ಮುಂದೂಡಲಾಗುತ್ತಿದೆ ಅಂತಾ ನಟ ರಜನಿಕಾಂತ್ ತಿಳಿಸಿದ್ದಾರೆ.
ಮಹೇಶ್ ಬಾಬು ಅಭಿನಯದ 'ಭಾರತ್ ಅನೆ ನೇನು' ಹಾಗೂ ಅಲ್ಲು ಅರ್ಜುನ್ ರ 'ನಾ ಪೆರು ಸೂರ್ಯ' ಕೂಡ ಅದೇ ಸಮಯಕ್ಕೆ ರಿಲೀಸ್ ಆಗಲಿದ್ದು, 2.0 ಚಿತ್ರದೊಂದಿಗೆ ಸಂಘರ್ಷ ಏರ್ಪಡುವ ಆತಂಕವಿತ್ತು. ಆದ್ರೆ ರಜನಿಕಾಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.2.0 ಚಿತ್ರ ಬಿಗ್ ಹಿಟ್ ಆಗಲಿದೆ ಅಂತಾ ರಜನಿಕಾಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು, ಆಯಮಿ ಜಾಕ್ಸನ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
Comments