Report Abuse
Are you sure you want to report this news ? Please tell us why ?
ಒಂದೇ ತೆರೆ ಮೇಲೆ ಸುದೀಪ್, ಉಪ್ಪಿ, ಪುನೀತ್ ?

30 Dec 2017 11:21 AM | Entertainment
424
Report
ಮುನಿರತ್ನ ಅವರು "ಕುರುಕ್ಷೇತ್ರ' ನಂತರ ಯಾವ ಸಿನಿಮಾ ನಿರ್ಮಿಸುತ್ತಾರೆಂಬ ಕುತೂಹಲಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ. ಚಾಣಕ್ಯ ಚಂದ್ರಗುಪ್ತ ಮೌರ್ಯ ಕುರಿತಾದ ಮತ್ತೊಂದು ಪೌರಾಣಿಕ ಸಿನಿಮಾ ಮಾಡುವ ಆಲೋಚನೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರಾದ ಉಪೇಂದ್ರ, ಸುದೀಪ್ ಹಾಗೂ ಪುನೀತ್ ಅವರನ್ನು ಬಳಸಿಕೊಳ್ಳಬೇಕೆಂಬ ಆಸೆ ಅವರಿಗಿದೆ.
"ಚುನಾವಣೆ ನಂತರ ಈ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತೇನೆ. ಮಗಧ ಸಾಮ್ರಾಜ್ಯದ ವೈಭವವನ್ನು ತೆರೆಮೇಲೆ ತರುವ ಆಸೆ ಇದೆ. "ಕುರುಕ್ಷೇತ್ರ'ಕ್ಕಿಂತ ಅದ್ಧೂರಿಯಾಗಿ ಆ ಸಿನಿಮಾ ಮಾಡುವ ಆಲೋಚನೆ ಇದೆ. ಸುದೀಪ್ ಅವರಿಂದ ಅಲೆಕ್ಸಾಂಡರ್ ಪಾತ್ರ ಮಾಡಿಸುವ ಆಸೆ ಇದೆ' ಎನ್ನುತ್ತಾರೆ ಮುನಿರತ್ನ.

Edited By
Shruthi G

Comments