'ಕನ್ನಡ'ದ ಕಹಳೆ ಮೊಳಗಿಸಿದ 'ಕಬಾಲಿ'
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಪೂರ್ವಭಾವಿಯಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಚೆನ್ನೈನ ರಾಘವೇಂದ್ರ ಕಲ್ಯಾಣ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕಳೆದ 5 ದಿನಗಳಿಂದ ಸಂವಾದ ನಡೆಸಿರುವ ಅವರು, ಕನ್ನಡಾಭಿಮಾನ ಪ್ರದರ್ಶಿಸಿದ್ದಾರೆ.
ನಾನು ಕನ್ನಡದಲ್ಲೇ ಓದಿದ್ದು, ಕನ್ನಡದಲ್ಲಿಯೇ ಕಲಿತು ಬೆಳೆದಿದ್ದೇನೆ. ನನ್ನ ಕುಟುಂಬ, ಸಹೋದರರು ಕನ್ನಡವನ್ನು ಕಲಿತಿದ್ದಾರೆ. ಕನ್ನಡದಲ್ಲಿಯೇ ಮಾತನಾಡುತ್ತಾರೆ ಎಂದು ರಜನಿಕಾಂತ್ ಹೇಳಿದ್ದಾರೆ. ತಮಿಳು ಚಿತ್ರರಂಗಕ್ಕೆ ಬಂದ ನಂತರ ತಮಿಳು ಮಾತನಾಡುವುದನ್ನು ಕಲಿತೆ. ನಿರ್ದೇಶಕ ಬಾಲಚಂದರ್ ತಮಿಳು ಕಲಿಯುವಂತೆ ತಿಳಿಸಿದ್ದರು. ಆರಂಭದಲ್ಲಿ ತಮಿಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಬರುತ್ತಿರಲಿಲ್ಲ. ಆದರೆ, ತಮಿಳು ಚಿತ್ರರಂಗ ನನ್ನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿದೆ ಎಂದು ತಿಳಿಸಿದ್ದಾರೆ.
Comments