ಸೂಪರ್ ಸ್ಟಾರ್ ರಜಿನಿ ಪಾಲಿನ ಆದರ್ಶ ವ್ಯೆಕ್ತಿ ಯಾರು ಗೊತ್ತಾ?
ಡಾ. ರಾಜ್ ಕುಮಾರ್ ಅವರು ನನ್ನ ಪಾಲಿನ ಆದರ್ಶ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ. 3 ನೇ ದಿನದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿರುವ ರಜಿನಿಕಾಂತ್ ಡಾ.ರಾಜ್ ಕುಮಾರ್ ಶಿವಾಜಿ ಗಣೇಶನ್, ಎಂಜಿಆರ್ ಗೆ ಸಮ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಅಣ್ಣಾವ್ರ ಕಾಲು ಮುಟ್ಟಿ ನಮಸ್ಕರಿಸಲು ಅವಕಾಶ ಸಿಕ್ಕಿದ್ದು ನನ್ನ ಜೀವನದ ಅವಿಸ್ಮರಣೀಯ ಘಟನೆ, ಬಹಳ ಹೊತ್ತು ಕಾದು ಡಾ.ರಾಜ್ ಅವರನ್ನು ಭೇಟಿ ಮಾಡಿದ ಕ್ಷಣವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ರಜಿನಿಕಾಂತ್ ತಮ್ಮ ಹಾಗೂ ಡಾ.ರಾಜ್ ಭೇಟಿಯ ಕ್ಷಣಗಳನ್ನು ಮೆಲುಕುಹಾಕಿದ್ದಾರೆ. ಇದೇ ವೇಳೆ ತಾವು ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚಿನ ದಿನಗಳನ್ನೂ ನೆನಪಿಸಿಕೊಂಡಿರುವ ರಜಿನಿಕಾಂತ್, ಬೆಂಗಳೂರಿನಲ್ಲಿದ್ದಾಗ ನಾನು ಡಾ.ರಾಜ್ ಅವರ ಚಿತ್ರಗಳನ್ನು ನೋಡಿ ಸಂತಸಪಡುತ್ತಿದ್ದೆ, ಅವರ ಪಾದಸ್ಪರ್ಶ ಮಾಡಲು ಕಾಯುತ್ತಿದೆ ಎಂದು ಹೇಳಿದ್ದಾರೆ.
Comments