ಮನೆಯಿಂದ ಹೊರಬಂದ ಸಮೀರಾಚಾರ್ಯ ಎಲ್ಲಿದ್ದಾರೆ ?

28 Dec 2017 9:41 AM | Entertainment
346 Report

ಶ್ರುತಿ, ಸಮೀರಾಚಾರ್ಯ ಹಾಗೂ ದಿವಾಕರ್ ಅವರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, 'ಬಿಗ್ ಬಾಸ್' ಬಿಗ್ ಟ್ವಿಸ್ಟ್ ಕೊಟ್ಟು ಸಮೀರಾಚಾರ್ಯ ಅವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ರಿಯಾಜ್ ಅವರು ಅತ್ತಿದ್ದು, ಅವರನ್ನು ಸದಸ್ಯರು ಸಮಾಧಾನಪಡಿಸಿದ್ದಾರೆ. ಚಂದನ್ ಕೂಡ ಅತ್ತಿದ್ದು, ಸಡನ್ ಆಗಿ ಸಮಿರಾಚಾರ್ಯ ಅವರನ್ನು ಕಳಿಸದೇ, ಎಲ್ಲರಿಗೂ ಹೇಳಿ ಹೋಗಲು ಅವಕಾಶ ನೀಡಬೇಕಿತ್ತು ಎಂದು ಹೇಳಿದ್ದಾರೆ.

ಸೀಕ್ರೆಟ್ ರೂಂನಲ್ಲಿ ಕುಳಿತುಕೊಂಡೇ ಸಮೀರಾಚಾರ್ಯ ಮತ್ತು ಜಯಶ್ರೀನಿವಾಸನ್ ಮನೆಯೊಳಗಿನ ಸದಸ್ಯರನ್ನು ವೀಕ್ಷಿಸಿದ್ದಾರೆ. ಕ್ಯಾಪ್ಟನ್ ರಿಯಾಜ್ ಅವರನ್ನು ಕನ್ ಫೆಷನ್ ರೂಂಗೆ ಕರೆದ 'ಬಿಗ್ ಬಾಸ್,' ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರ ಬಟ್ಟೆಗಳನ್ನು ಪ್ಯಾಕ್ ಮಾಡಿ ಇಡುವಂತೆ ಸೂಚಿಸಿದ್ದು, ರೂಂನಿಂದ ಹೊರ ಬಂದ ರಿಯಾಜ್ ಅತ್ತಿದ್ದಾರೆ. ಅವರನ್ನು ಕೃಷಿ ಸಮಾಧಾನಪಡಿಸಿ, ಸೀಕ್ರೆಟ್ ರೂಂನಲ್ಲಿರುವ ಅವರಿಗೆ ಬಟ್ಟೆ ಕೊಡಲು ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ. ರಿಯಾಜ್ ತಮ್ಮ ಬಗ್ಗೆ ಅತ್ತಿದ್ದಕ್ಕೆ ಜಯಶ್ರೀನಿವಾಸನ್ ಮತ್ತು ಸಮೀರ್ ಮಾತನಾಡಿಕೊಂಡಿದ್ದಾರೆ. ಮನೆಯೊಳಗಿನ ಸದಸ್ಯರಿಗೆ ವಿವಿಧ ಚಟುವಟಿಕೆಗಳನ್ನು ನೀಡಲಾಗಿದೆ. ಪ್ರಜಾಪ್ರಭುತ್ವದ ಮಹತ್ವ ತಿಳಿಸಲು 'ಪ್ರಜಾರಾಜ್ಯ' ಟಾಸ್ಕ್ ನೀಡಲಾಗಿದೆ. ಅದರಲ್ಲಿ 1 ತಂಡದಲ್ಲಿ ರಿಯಾಜ್, ದಿವಾಕರ್, ಚಂದನ್, ಶ್ರುತಿ ಅವರಿದ್ದು, ಮತ್ತೊಂದು ತಂಡದಲ್ಲಿ ಅನುಪಮಾ, ಕಾರ್ತಿಕ್, ಶ್ರುತಿ, ಕೃಷಿ ಅವರಿದ್ದಾರೆ.

ಸೀಕ್ರೆಟ್ ರೂಂನಲ್ಲಿರುವ ಜಯಶ್ರೀನಿವಾಸನ್ ಮತ್ತು ಸಮೀರಾಚಾರ್ಯ ಅವರು ಬೆಂಬಲಿಸಿದ್ದರಿಂದ ದಿವಾಕರ್ ಮತ್ತು ಶ್ರುತಿ ಅವರು ತಮ್ಮ ತಂಡದ ನಾಯಕರಾಗಿದ್ದಾರೆ. ಈ ವಿಷಯ ಮನೆಯೊಳಗಿನ ಸದಸ್ಯರಿಗೆ ತಿಳಿದಿಲ್ಲ. ಎರಡೂ ತಂಡದವರು 2 ಪಕ್ಷಗಳಾಗಿದ್ದು, ತಮ್ಮ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಎರಡೂ ಪಕ್ಷಗಳಿಗೆ ಹಣ ಕೊಟ್ಟಿರುವ 'ಬಿಗ್ ಬಾಸ್' ಬಹುಮತಕ್ಕೆ ಕನಿಷ್ಠ 5 ಸದಸ್ಯರ ಬೆಂಬಲ ಬೇಕೆಂದು ತಿಳಿಸಿದ್ದಾರೆ. ಎರಡೂ ತಂಡಗಳು ತಲಾ ನಾಲ್ವರು ಸದಸ್ಯರನ್ನು ಹೊಂದಿದ್ದು, ಎದುರಾಳಿ ತಂಡದ ಒಬ್ಬರು ಸದಸ್ಯರನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳಬೇಕಿದೆ. ಯಾರು ಯಾರನ್ನು ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By

Shruthi G

Reported By

Madhu shree

Comments