ರೈತರ ಹೋರಟಕ್ಕೆ ಬೆಂಬಲ ನೀಡುತ್ತಿರುವ ಶಿವರಾಜ್ ಕುಮಾರ್ ಹಾಗೂ ಯಶ್
ಶಿವರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವಾಣಿಜ್ಯಮಂಡಳಿಯಲ್ಲಿ ಸಭೆ ನಡೆಸಿ ರೈತರ ಹೋರಾಟದ ಬಗ್ಗೆ ಸಿನಿಮಾರಂಗ ಹೇಗೆ ಭಾಗಿ ಆಗಬೇಕು ಎಂದು ನಿರ್ಧರಿಸಲಿದ್ದಾರೆ. ಮಹದಾಯಿ ಹೋರಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ನ್ಯಾಯ ಕೊಡಿ ಎಂದು ರೈತರು ,ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಛೇರಿ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ.
ನಾಡು-ನುಡಿ-ಜಲ ವಿಚಾರ ಬಂದಾಗ ಹಿಂದಿನಿಂದಲೂ ಅನ್ನದಾತರ ಪರವಾಗಿ ನಿಲ್ಲುವ ಕನ್ನಡ ಸಿನಿಮಾರಂಗ ಕಳೆದ ಎರಡು ದಿನಗಳಿಂದ ರೈತರ ಜೊತೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಸೇರಿದಂತೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಿನ್ನೆಯ ಪ್ರತಿಭಟನೆಯಲ್ಲಿ ಪಾಳ್ಗೊಳ್ಳುವ ಮೂಲಕ ರೈತರ ಕಷ್ಟದಲ್ಲಿ ನಾವು ಕೂಡ ಭಾಗಿ ಎಂದಿದ್ದಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ರೈತರ ಹೋರಾಟಕ್ಕೆ ನಾವು ಸದಾ ಸಿದ್ದವಾಗಿದ್ದೇವೆ ಎಂದು ಟ್ವಿಟ್ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇಂದು ನಡೆಯುವ ಸಭೆಯಲ್ಲಿ ಸಾ
Comments