ಧೋನಿ ಮಗಳು ಜೀವಾ ಯಾವ ಸೂಪರ್ ಸ್ಟಾರ್ ಗೂ ಕಮ್ಮಿಯಿಲ್ಲ
ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ ಯಾವ ಸೂಪರ್ ಸ್ಟಾರ್ ಗೂ ಕಮ್ಮಿಯಿಲ್ಲ. ಇಂಟರ್ನೆಟ್ ನಲ್ಲಿ ಆಗಾಗ ಧೋನಿ ಪುತ್ರಿಯ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಜೀವಾಳ ಕ್ರಿಸ್ಮಸ್ ಹಾಡಿನ ವಿಡಿಯೋ ವೈರಲ್ ಆಗಿದೆ.
ಅಪ್ಪನ ಜೊತೆ ಕುಳಿತು ಜೀವಾ 'ವಿ ವಿಶ್ ಯು ಎ ಮೇರಿ ಕ್ರಿಸ್ಮಸ್' ಹಾಡನ್ನು ಮುದ್ದಾಗಿ ಹಾಡಿದ್ದಾಳೆ. ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಸರಣಿ ಮುಕ್ತಾಯವಾದ ಬೆನ್ನಲ್ಲೇ ಧೋನಿ ಮಗಳ ಜೊತೆ ಆರಾಮಾಗಿ ಸಮಯ ಕಳೆದಿದ್ದಾರೆ. ಕೆಲದಿನಗಳ ಹಿಂದಷ್ಟೆ ಜೀವಾ ಮಲಯಾಳಂ ಹಾಡೊಂದನ್ನು ಹಾಡಿದ್ಲು. ಆ ವಿಡಿಯೋ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ವಿಶೇಷ ಅಂದ್ರೆ ಲಂಕಾ ವಿರುದ್ಧದ ಟಿ-20 ಸರಣಿ ಗೆಲುವಿನ ನಂತರ ಧೋನಿ ಸೇರಿದಂತೆ ತಂಡದ ಆಟಗಾರರೆಲ್ಲ ಕ್ರಿಸ್ಮಸ್ ಆಚರಿಸಿದ್ದಾರೆ.
Comments