ಸಿಲಿಕಾನ್ ಸಿಟಿ ಗೆ ಕಾಲಿಡಲಿದ್ದಾಳೆ ಸನ್ನಿ

ಬಾಲಿವುಡ್ ಚಿತ್ರನಟಿ ಸನ್ನಿ ಲಿಯೋನ್ ಅವರ 'ಸನ್ನಿ ನೈಟ್ ಇನ್ ಬೆಂಗಳೂರು' ಕಾರ್ಯಕ್ರಮಕ್ಕೆ ನಗರ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಆಯೋಜಕರು ಸನ್ನಿ ಲಿಯೋನ್ರನ್ನು ಫೆಬ್ರವರಿಯಲ್ಲಿ ನಗರಕ್ಕೆ ಕರೆ ತರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಟೈಮ್ಸ್ ಕ್ರಿಯೇಷನ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಹರೀಶ್, ರಾಜ್ಯ ವ್ಯಾಪ್ತಿ ಹೊಸ ವರ್ಷಾಚರಣೆ ಸಂಭ್ರಮ ಇರುವುದರಿಂದ ಪೊಲೀಸರಿಗೆ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸುವುದು ಕಷ್ಟವಾಗಲಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ನಿರಾಕರಿಸಿರುವ ಪೊಲೀಸರ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಕಾರ್ಯಕ್ರಮವನ್ನು ಫೆಬ್ರವರಿ ತಿಂಗಳಿಗೆ ಮುಂದೂಡಲು ನಿರ್ಧರಿಸಿದ್ದೇವೆ. ಶೀಘ್ರ ಈಶಾನ್ಯ ವಲಯದ ಡಿಸಿಪಿ ಎಸ್. ಗಿರೀಶ್ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.
Comments