ಸಂಗೀತ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ : ಅರ್ಜುನ್ ಜನ್ಯರಿಗೆ ಗಾಯ
ಮಂಗಳೂರಿನ ಫೋರಂ ಮಾಲ್ ನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿತವಾಗಿತ್ತು. ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದ್ದ ಈ ಮ್ಯೂಸಿಕಲ್ ಕನ್ಸರ್ಟ್ ಕಾರ್ಯಕ್ರಮದಲ್ಲಿ ಅಗ್ನಿಯ ಕಿಡಿ ಅನಾಹುತಕ್ಕೆ ಕಾರಣವಾಯಿತು.
ಈ ಅವಘಡದಲ್ಲಿ ಬೈಕ್ ಕ್ರಾಕರ್ಸ್ ಬೆಂಕಿ ಹೊತ್ತಿಕೊಂಡಿದ್ದು ಅರ್ಜುನ್ ಜನ್ಯಾ ಹಾಗೂ ಅಲ್ಲಿದ್ದವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಈ ಮ್ಯೂಸಿಕಲ್ ಕನ್ಸರ್ಟ್ ನಲ್ಲಿ ಅರ್ಜುನ್ ಜನ್ಯ ಪ್ರಮುಖ ಆಕರ್ಷಣೆಯಾಗಿದ್ದರು. ಅವರು ವೇದಿಕೆಯತ್ತ ಬೈಕ್ ಏರಿ ಬರುವ ವೇಳೆ ಬೈಕ್ ನ ನಾಲ್ಕು ಸುತ್ತಲೂ ಕ್ರಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಜನ್ಯಾ ಅವರು ಬೈಕಿನಿಂದ ಇಳಿಯುವ ವೇಳೆ ಕ್ರಾಕರ್ಸ್ ಕಿಡಿಗಳು ಭುಜಕ್ಕೆ ಮತ್ತು ಕೈಗೆ ತಾಗಿದೆ. ಇದರಿಂದಾಗಿ ಅರ್ಜುನ್ ಜನ್ಯಾ ಅವರಿಗೆ ಕರಟಿದ ಗಾಯಗಳಾಗಿವೆ. ಈ ನಡುವೆಯೂ ಗಾಯಕ ಅರ್ಜುನ್ ಜನ್ಯಾ ಅವರು ಸಮಾರಂಭದಲ್ಲಿ ಜಮಾಯಿಸಿದ್ದ ಜನರನ್ನು ರಂಜಿಸಿದರು. ವೇದಿಕೆಯಲ್ಲಿ ಹೆಜ್ಜೆ ಹಾಕಿ ಕುಣಿದಾಡಿದರು.
Comments