ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ?

ಬಿಗ್ ಬಾಸ್' ಮನೆಯಲ್ಲಿ ಈ ವಾರ ನೀಡಲಾಗಿದ್ದ ಮೇಲಾ ಫೀಮೇಲಾ ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಸದಸ್ಯರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಹಿಳಾ ತಂಡ ಸೋಲು ಕಂಡಿದ್ದು, ವಿಜೇತ ಪುರುಷ ತಂಡಕ್ಕೆ ವಿಶೇಷ ಔತಣ ನೀಡಲಾಗಿದೆ. ಮಹಿಳಾ ತಂಡದವರು ಫ್ಯಾಷನ್ ಶೋ ನಡೆಸಿಕೊಟ್ಟಿದ್ದು, ಅದರಲ್ಲಿ ಅನುಪಮಾ ಮತ್ತು ನಿವೇದಿತಾ ವಿಜೇತರಾಗಿ ಉಡುಗೊರೆ ಪಡೆದಿದ್ದಾರೆ.
ಈ ವಾರ 4000 ಲಕ್ಸುರಿ ಬಜೆಟ್ ಪಾಯಿಂಟ್ ಗಳನ್ನು ಪುರುಷರ ತಂಡ ಸಂಗ್ರಹಿಸಿದ್ದು, ಅದರಲ್ಲಿ ನಿಯಮ ಉಲ್ಲಂಘನೆಯ ಕಾರಣಕ್ಕೆ 1000 ಪಾಯಿಂಟ್ ಕಡಿತ ಮಾಡಲಾಗಿದೆ. ಇನ್ನು ಈ ವಾರ ಕ್ಯಾಪ್ಟನ್ ಆಯ್ಕೆಯಾಗಿಲ್ಲದ ಕಾರಣ, ಪುರುಷರ ತಂಡದಿಂದ ಬೆಸ್ಟ್ ಪರ್ ಫಾರ್ಮರ್, ಮಹಿಳಾ ತಂಡದ ಕಳಪೆ ಪ್ರದರ್ಶನ ನೀಡಿದ ಸದಸ್ಯರನ್ನು ಆಯ್ಕೆ ಮಾಡುವಂತೆ 'ಬಿಗ್ ಬಾಸ್' ಸೂಚಿಸಿದ್ದಾರೆ. ಅದರಂತೆ ಪುರುಷ ತಂಡದ ಸದಸ್ಯರು ರಿಯಾಜ್ ಅವರನ್ನು ಬೆಸ್ಟ್ ಪರ್ ಫಾರ್ಮರ್ ಆಗಿ ಆಯ್ಕೆ ಮಾಡಿದ್ದಾರೆ. ಮಹಿಳಾ ತಂಡದಿಂದ ಅನುಪಮಾ ಅವರು ಕಳಪೆ ಬೋರ್ಡ್ ಹಾಕಿಕೊಂಡಿದ್ದಾರೆ.
ಪುರುಷ ತಂಡದ ಸದಸ್ಯರು ಟಾಸ್ಕ್ ನಲ್ಲಿ ಗೆಲ್ಲಲು ಪರ್ಸನಲ್ ಆಗಿ ಮಾತನಾಡುತ್ತಿದ್ದಾರೆ. ಸುಮ್ಮನೆ ಜಗಳವಾಡುತ್ತಾರೆ ಎಂದು ಕೃಷಿ ಅತ್ತಿದ್ದು, ಇದೇ ಕಾರಣದಿಂದ ನಿವೇದಿತಾ ಅವರೂ ಕಣ್ಣೀರಿಟ್ಟಿದ್ದಾರೆ. ಅವರಿಗೆ ಮಹಿಳಾ ಸದಸ್ಯರು ಸಮಾಧಾನಪಡಿಸಿದ್ದಾರೆ. ಇನ್ನು ಈ ವಾರ ಅನುಪಮಾ, ದಿವಾಕರ್, ಜಯಶ್ರೀನಿವಾಸನ್, ಲಾಸ್ಯ, ನಿವೇದಿತಾ ಹಾಗೂ ಸಮೀರಾಚಾರ್ಯ ಅವರು ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments