ಸಮೀರಾಚಾರ್ಯ ಹಾಗೂ ಅನುಪಮಾ ಅವರ ನಡುವೆ ಮಾತಿನ ಚಕಮಕಿ
ಪುರುಷರು ಮತ್ತು ಮಹಿಳಾ ತಂಡಗಳ ಸದಸ್ಯರು ಸವಾಲ್ ನಲ್ಲಿ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ದಾರದಿಂದ ಕಟ್ಟಲಾಗಿರುವ ಗೋಪುರವನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ತಂಡಗಳ ನಡುವೆ ಪೈಪೋಟಿಯೇ ನಡೆದಿದೆ. ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಲಾಸ್ಯ ಗೋಪುರದ ಹಗ್ಗವನ್ನು ಕಿತ್ತ ಕಾರಣಕ್ಕೆ ನಿಯಮ ಉಲ್ಲಂಘನೆಯಾಗಿದೆ ಎಂದು ಭಾರೀ ಚರ್ಚೆಯೇ ನಡೆದಿದೆ.
ರಿಯಾಜ್ ಪದೇ ಪದೇ ಹೇಳಿದ್ದನ್ನೇ ಹೇಳುತ್ತಾರೆ ಎಂದು ಕಾರ್ತಿಕ್ ಆಕ್ಷೇಪಿಸಿದ್ದಾರೆ. ಕ್ಯಾಪ್ಟನ್ ಆದವರು ಮಾತ್ರ ಸಲಹೆ ಸೂಚನೆ ನೀಡಲಿ. ಎಲ್ಲರೂ ಮಾತನಾಡುವುದು ಬೇಡ ಎಂದು ಹೇಳಿದ್ದು, ಇದಕ್ಕೆ ರಿಯಾಜ್, ತಂಡದ ಗೆಲುವಿಗಾಗಿ ಎಲ್ಲರೂ ಸಲಹೆ ನೀಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇನ್ನು 2 ನೇ ದಾರದ ಗೋಪುರ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಹಾಗೂ ಕತ್ತರಿ ಇಲ್ಲದ ಕಾರಣ, ಮಹಿಳಾ ಸದಸ್ಯರು ಕಷ್ಟಪಟ್ಟಿದ್ದಾರೆ. ಚಂದನ್, ಕಾರ್ತಿಕ್, ಸಮೀರಾಚಾರ್ಯ ಅವರು ಗೋಪುರದ ದಾರ ಕತ್ತರಿಸಲು ಬಂದಾಗ, ಮಹಿಳಾ ಸದಸ್ಯರು ತಡೆಯುವ ಪ್ರಯತ್ನ ಮಾಡಿದ್ದಾರೆ. ಆಗ, ಅನುಪಮಾ ಮತ್ತು ಸಮೀರಾಚಾರ್ಯ ಅವರ ನಡುವೆ ಭಾರೀ ಜಗಳವಾಗಿದೆ. ದಾರವನ್ನು ಕತ್ತರಿಸುವ ಧಾವಂತದಲ್ಲಿ ಜಗಳವಾಗಿ ಅನುಪಮಾ ಆಡಿದ ಮಾತಿನಿಂದ ಸಿಟ್ಟಾದ ಸಮೀರಾಚಾರ್ಯ ಸರಿಯಾಗಿ ಮಾತನಾಡುವಂತೆ ಜೋರು ಮಾಡಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅವರನ್ನು ರಿಯಾಜ್ ಸಮಾಧಾನ ಪಡಿಸಿದ್ದಾರೆ.
Comments