ಪ್ರಭಾಸ್ ಅನುಷ್ಕಾ ಶೆಟ್ಟಿ ಬಗ್ಗೆ ಏನ್ ಹೇಳಿದ್ರು ಗೊತ್ತಾ..!!

ಟೀಸರ್ ವೀಕ್ಷಿಸಿದ ಪ್ರಭಾಸ್, ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿರುವ ಅವರು, ಗುಡ್ ಲಕ್ ಸ್ವೀಟಿ, ಸಿನಿಮಾಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಅನುಷ್ಕಾ ಶೆಟ್ಟಿ ಮತ್ತು ಚಿತ್ರತಂಡಕ್ಕೆ ಶುಭವಾಗಲಿ ಎಂದು ಹೇಳಿದ್ದಾರೆ.
ಬಾಹುಬಲಿ' ಸ್ಟಾರ್ ಪ್ರಭಾಸ್ 'ಸಾಹೋ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 'ಬಾಹುಬಲಿ -2' ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿದ್ದ ನಟಿ ಅನುಷ್ಕಾ ಶೆಟ್ಟಿ 'ಭಾಗಮತಿ' ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿರುವ 'ಭಾಗಮತಿ' ಚಿತ್ರದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿ ಹಲ್ ಚಲ್ ಎಬ್ಬಿಸಿತ್ತು. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ 'ಭಾಗಮತಿ' ಜನವರಿಯಲ್ಲಿ ರಿಲೀಸ್ ಆಗಲಿದೆ. ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ನೋಡುಗರನ್ನು ಸೆಳೆದಿದೆ
Comments