ಪುನೀತ್ ರಾಜ್ಕುಮಾರ್ ತಮ್ಮ ಅಭಿಮಾನಿಗಳಿಗೆ ಏನೆಂದು ಮನವಿ ಮಾಡಿದ್ದಾರೆ ಗೊತ್ತಾ?
ಅಂಜನೀಪುತ್ರ ಚಿತ್ರದ ಮತ್ತು ನನ್ನ ಕಟೌಟ್ಗಳಿಗೆ ಹಾರ ಹಾಕಬೇಡಿ ಮತ್ತು ಹಾಲಿನ ಅಭಿಷೇಕವನ್ನು ಮಾಡಬೇಡಿ. ಅದೇ ಹಣದಿಂದ ಹಸಿದ ಮಕ್ಕಳು ಮತ್ತು ವೃದ್ಧರಿಗೆ ನೆರವು ನೀಡಿ ಎಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಅಂಜನೀಪುತ್ರ ಚಿತ್ರ ಇಂದು ಬಿಡುಗಡೆಯಾಗಿದೆ. ಈ ನಡುವೆ ಟ್ವೀಟ್ ಮಾಡಿದ್ದ ಪುನೀತ್ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದಾರೆ. ಜತೆಗೆ ಹಾಲು, ಹಾರಕ್ಕಾಗಿ ಹಣ ದುರುಪಯೋಗ ಮಾಡದಂತೆ ಸಂದೇಶ ರವಾನಿಸಿದ್ದಾರೆ.
Comments