ಟೈಗರ್ ಜಿಂದಾ ಹೇ ಚಿತ್ರದ ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!!

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರ ಇದೇ ಡಿಸೆಂಬರ್ 22 ರಂದು ತೆರೆ ಮೇಲೆ ಬರಲಿದೆ. ಚಿತ್ರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಚಿತ್ರದ ಟಿಕೆಟ್ ಮುಂಗಡ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಟಿಕೆಟ್ ಬೆಲೆ ಕೇಳಿದ್ರೆ ಆಶ್ಚರ್ಯವಾಗೋದು ಗ್ಯಾರಂಟಿ.
ಸುಮಾರು 140 ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ವೆಚ್ಚವನ್ನು ಪ್ರೇಕ್ಷಕರ ಜೇಬಿನಿಂದ ಕೇಳಲು ಮೇಕರ್ಸ್ ಪ್ರಯತ್ನ ಮಾಡ್ತಿರೋದು ಖಚಿತ. ಯಾಕೆಂದ್ರೆ ಟೈಗರ್ ಜಿಂದಾ ಹೇ ಚಿತ್ರದ ಟಿಕೆಟ್ ಬೆಲೆ ಹೌಹಾರುವಂತಿದೆ. ದೆಹಲಿಯ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಒಂದರ ಬೆಲೆ 2000 ರೂಪಾಯಿಯಿಂದ 2400 ರೂಪಾಯಿಗೆ ಮಾರಾಟವಾಗ್ತಿದೆ. ಮುಂಬೈನಲ್ಲಿ ಸಂಜೆ ಶೋ ಟಿಕೆಟ್ ಬೆಲೆ 1200ರಿಂದ 1600 ರೂಪಾಯಿ. ಚಿತ್ರಮಂದಿರಗಳಲ್ಲಿ ಶುಕ್ರವಾರ ಟಿಕೆಟ್ ಖರೀದಿಸುವವರು 300-400 ರೂಪಾಯಿ ನೀಡಬೇಕು. ಫಸ್ಟ್ ಡೇ ಫಸ್ಟ್ ಶೋ ನೋಡಬಯಸುವವರು ಎಷ್ಟು ಹಣ ತೆರಬೇಕೆಂಬುದು ಆಯಾ ಚಿತ್ರಮಂದಿರಗಳು ನಿರ್ಧರಿಸಲಿವೆ. ಆದ್ರೆ ಸಲ್ಮಾನ್ ಖಾನ್ ಅಭಿಮಾನಿಗಳು ಮಾತ್ರ ಈ ಹಣ ಜಾಸ್ತಿಯೇನಲ್ಲ ಎನ್ನುತ್ತಿದ್ದಾರೆ.
Comments