'ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ ಬಳಸುತ್ತಿರುವ ರಿಯಾಜ್

'ಬಿಗ್ ಬಾಸ್' ಸದಸ್ಯರಿಗೆ ಚಟುವಟಿಕೆ ನೀಡಲಾಗಿದ್ದು, ಜೈಲಿನಿಂದ ತಪ್ಪಿಸಿಕೊಂಡ ಕೊಲೆಗಾರ ಮನೆ ಸೇರಿಕೊಂಡಿದ್ದು, ಮನೆಯ ಸದಸ್ಯರು ಹತ್ಯೆಗೆ ಈಡಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಸೂಚನೆ ನೀಡಲಾಗಿದೆ. ರಿಯಾಜ್, ಅನುಪಮಾ ಅವರಿಗೆ ಕೊಲೆಗಾರನ ಪಾತ್ರ ನಿರ್ವಹಿಸಲು ಹೇಳಲಾಗಿದ್ದು, 'ಬಿಗ್ ಬಾಸ್' ಸಲಹೆ ಸೂಚನೆ ನೀಡಲು ರಿಯಾಜ್ ಗೆ ಮೊಬೈಲ್ ನೀಡಿದ್ದಾರೆ.
ಅವರು ಫೋನ್ ಮೂಲಕ 'ಬಿಗ್ ಬಾಸ್'ನಿಂದ ಸೂಚನೆ ಪಡೆದಿದ್ದಾರೆ. ಸದಸ್ಯರು ಮಾತನಾಡುವ ಸಂದರ್ಭದಲ್ಲಿ ಜಯಶ್ರೀನಿವಾಸ್, ಶ್ರುತಿ ಬಳಸಿದ ಭಾಷೆ ಬಗ್ಗೆ ಚರ್ಚೆ ನಡೆದಿದೆ. ಲಕ್ಸುರಿ ಬಜೆಟ್ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅನುಪಮಾ ಮತ್ತು ಶ್ರುತಿ ಅವರಿಗೆ ತಿನಿಸು ಬಂದಿದ್ದು, ಕೃಷಿ ಅದರ ರುಚಿ ನೋಡಿದ ಕಾರಣಕ್ಕೆ ಮುಂದಿನ ವಾರದ 300 ಬಜೆಟ್ ಪಾಯಿಂಟ್ ಕಟ್ ಮಾಡಲಾಗಿದೆ. ಇದೇ ವಿಚಾರಕ್ಕೆ ಸದಸ್ಯರು ಕೃಷಿ ಬಗ್ಗೆ ಕೆಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಕೆಲವರಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿದ್ದು, ಅದನ್ನು ಬೇರೆ ಸದಸ್ಯರಿಗೆ ತಿಳಿಯದಂತೆ ಜಾಣ್ಮೆಯಿಂದ ಆಟವಾಡಬೇಕಿದೆ. ಈ ನಿಟ್ಟಿನಲ್ಲಿ ಸದಸ್ಯರು ಪ್ರಯತ್ನ ನಡೆಸಿದ್ದಾರೆ. ಸಮೀರಾಚಾರ್ಯ ಅವರಿಗೆ ತಿಂಡಿ ತಿನ್ನಿಸಿದ ಕೃಷಿ, ಮನೆಯಲ್ಲಿ ಯಾರೂ ನಿಮ್ಮ ದ್ವೇಷಿಗಳಲ್ಲ. ನಿಮ್ಮನ್ನು ಮನೆಗೆ ಬರುವ ಮೊದಲು ಯಾರೂ ನೋಡಿಲ್ಲ. 3 ಹೊತ್ತು ಊಟ ಮಾಡಿ. ನೀವು ಉಪವಾಸವಿದ್ದು ಸಾಧಿಸುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಎಲ್ಲರೊಂದಿಗೆ ಬೆರೆಯುವಂತೆ ಸಲಹೆ ನೀಡಿದ್ದಾರೆ.
Comments