ಮೊದಲ ಬಾರಿ ಫೇಸ್ ಬುಕ್ ಲೈವ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸಹೋದರರು

18 Dec 2017 12:11 PM | Entertainment
245 Report

ಕನ್ನಡದ ವರನಟ ಡಾ. ರಾಜ್ ಅವರ ಪುತ್ರರಾದ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇದೇ ಮೊದಲ ಬಾರಿ ಫೇಸ್ ಬುಕ್ ಲೈವ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಪವರ್ ಸ್ಟಾರ್ ಪುನೀತ್ ಇಬ್ಬರೂ ಅಭಿಮಾನಿಗಳ ಪ್ರಶ್ನೆಗಳಿಗೆ ಪಟ ಪಟನೆ ಉತ್ತರಿಸಿದ್ದಾರೆ.

ಈ ವೇಳೆ ಶಿವರಾಜ್ ಕುಮಾರ್ "ನಾವಿಬ್ಬರೂ (ಶಿವಣ್ಣ ಹಾಗೂ ಪುನೀತ್) ಒಟ್ಟಿಗೆ ಚಿತ್ರವೊಂದರಲ್ಲಿ ನಟಿಸಲಿದ್ದೇವೆ" ಎಂದಿದ್ದಾರೆ, ಇದಾಗಲೇ ಅವರಿಬ್ಬರೂ ನಟಿಸುವ ಚಿತ್ರದ ಕಥೆಗೆ ಶಿವರಾಜ್ ಕುಮಾರ್ ಓಕೆ ಹೇಳಿದ್ದಾರೆ. ಪುನೀತ್ ಅವರ ಒಪ್ಪಿಗೆಗೆ ಕಾಯುತ್ತಿದ್ದಾರೆ ಎಂದರು. ಇದೇ 21ರಂದು ಬಿಡುಗಡೆಯಾಗುತ್ತಿರುವ ಪುನೀತ್ ಅಭಿನಯದ 'ಅಂಜನಿಪುತ್ರ' ಚಿತ್ರ ನಿರೀಕ್ಷೆ ಹುಟ್ಟಿಸಿರುವ ಈ ಸಮಯದಲ್ಲೇ ಇಬ್ಬರು ಸೋದರರೂ ಒಟ್ಟಿಗೆ ಲೈವ್ ಬಂದಿದ್ದು, ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ `ಟಗರು' ಚಿತ್ರದ ಬಗ್ಗೆ ಪುನೀತ್ ಸಹ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. ಡಿ. 23ರಂದು 'ಟಗರು' ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿರುವುದಾಗಿ ಶಿವರಾಜ್ ಕುಮಾರ್ ಇದೇ ಸಮಯದಲ್ಲಿ ಘೋಷಿಸಿದರು.

Edited By

Hema Latha

Reported By

Madhu shree

Comments