ನಟ ಶ್ರೀಮುರಳಿ ಬಗೆಗಿನ ಬಿಗ್ ನ್ಯೂಸ್ ಏನು ಗೊತ್ತಾ?

16 Dec 2017 5:25 PM | Entertainment
379 Report

ಮಫ್ತಿ' ಚಿತ್ರಕ್ಕೆ ಜನಮನ್ನಣೆ ಸಿಕ್ಕಿದ್ದೇ ತಡ ಎಲ್ಲರ ಕಣ್ಣು ಶ್ರೀಮುರಳಿ ಮೇಲೆ ಬಿದ್ದಿದೆ. ಇಂಟರೆಸ್ಟಿಂಗ್ ಅಂದರೆ ಶ್ರೀಮುರಳಿ ಅಭಿಮಾನಿಗಳ ಬಾಯಿಗೆ ಒಂದೇ ಸಲ ಎರಡು ಲಡ್ಡು ಬಿದ್ದಿದೆ. ಶ್ರೀಮುರಳಿ ಎರಡು ಸಿನಿಮಾ ಘೋಷಣೆಯಾಗಿದೆ. ಜಯಣ್ಣ ನಿರ್ಮಾಣದ ಸಿನಿಮಾ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಯಾರು ನಿರ್ದೇಶಕರು ಅನ್ನುವುದೂ ಪಕ್ಕಾ ಆಗಿಲ್ಲ. ಇನ್ನೊಂದು ವಾರದಲ್ಲಿ ಈ ಚಿತ್ರದ ಅಂತಿಮ ಕೆಲಸಗಳು ಹೊರಗೆ ಬರಲಿವೆ.

2 ಮತ್ತೊಂದು ಬಿಗ್ ನ್ಯೂಸ್ ಎಂದರೆ ನಟ ಶ್ರೀಮುರಳಿ ಮುಂದೆ ಮತ್ತೊಂದು ಸಿನಿಮಾ ಬಂದಿರುವುದು. ಹೊಂಬಾಳೆ ಪ್ರೊಡಕ್ಷನ್ ಅರ್ಪಣೆಯಲ್ಲಿ ಕಾರ್ತಿಕ್ ಗೌಡ ಅವರು ತಮ್ಮ ಕೆಆರ್ಕೆ ಸ್ಟುಡಿಯೋ ಬ್ಯಾನರ್'ನಡಿ ಶ್ರೀಮುರಳಿ ಅವರಿಗೊಂದು ಸಿನಿಮಾ ನಿರ್ಮಿಸುತ್ತಿದ್ದಾರೆ. ಜಯಣ್ಣ ನಿರ್ಮಾಣದ ಚಿತ್ರದ ನಂತರ ಸೆಟ್ಟೇರಲಿರುವ ಈ ಚಿತ್ರಕ್ಕೆ ಯೋಗಿ ಜಿ ರಾಜ್ ಅವರು ನಿರ್ದೇಶಕರು. ಗಣೇಶ್ ಅಭಿನಯದ `ಖುಷಿ ಖುಷಿಯಾಗಿ' ಹಾಗೂ ಶಿವರಾಜ್ ಕುಮಾರ್ ಅಭಿನಯದ `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಗಳಿಗೆ ಆಯಕ್ಷನ್ ಕಟ್ ಹೇಳಿದ ಅವರು ಯೋಗಿ ಜಿ ರಾಜ್. ಈಗ ಅವರ ಮೂರನೇ ಚಿತ್ರ ಶ್ರೀಮುರಳಿ ನಟನೆಯಲ್ಲಿ ಸೆಟ್ಟೇರುತ್ತಿದೆ.

Edited By

Shruthi G

Reported By

Madhu shree

Comments