ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಲಿದ್ದಾರೆ?
ಇನ್ನು ಈ ವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಚಂದನ್, ದಿವಾಕರ್, ಜಗನ್, ಜಯಶ್ರೀನಿವಾಸನ್, ಸಮೀರಾಚಾರ್ಯ, ಶ್ರುತಿ ನಾಮಿನೇಟ್ ಆಗಿದ್ದು, ಯಾರು ಹೊರ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
'ಬಿಗ್ ಬಾಸ್' ಮನೆಯಲ್ಲಿ ಸದಸ್ಯರಿಗೆ ನೀಡಲಾಗಿದ್ದ 'ಜೊತೆ ಜೊತೆಯಲಿ' ಲಕ್ಸುರಿ ಬಜೆಟ್ ಟಾಸ್ಕ್ ಮುಕ್ತಾಯವಾಗಿದೆ. ಕ್ಯಾಪ್ಟನ್ ಕೃಷಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾಗಿ 'ಬಿಗ್ ಬಾಸ್' ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಈ ವಾರ ಕಳಪೆ ಮತ್ತು ಉತ್ತಮ ಪ್ರದರ್ಶನ ನೀಡಿದ ಜೋಡಿಗಳನ್ನು ಆಯ್ಕೆ ಮಾಡಿದ್ದು, ಅನುಪಮಾ -ಶ್ರುತಿ ಅವರನ್ನುಉತ್ತಮ ಸ್ಪರ್ಧಿಗಳಾಗಿ ಆಯ್ಕೆ ಮಾಡಿ, ಸಂಯುಕ್ತಾ -ಲಾಸ್ಯ ಅವರಿಗೆ ಕಳಪೆ ಫಲಕ ನೀಡಿದ್ದಾರೆ. ಅಲ್ಲದೇ, ಮನಗೆದ್ದ ಜೋಡಿಯಾಗಿ ಜಗನ್ -ಕಾರ್ತಿಕ್ ಅವರನ್ನು ಆಯ್ಕೆ ಮಾಡಿದ್ದಾರೆ.
Comments