ಸುಶ್ಮಿತಾ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

16 Dec 2017 12:38 PM | Entertainment
345 Report

ಮುಂಬೈನಲ್ಲಿರುವ ಸೇಂಟ್ ಆಂಡ್ರ್ಯೂಸ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಳು. ಈ ವೇಳೆ ಮೇ ಹೂ ನಾ ಚಿತ್ರದ ತುಮ್ಸೆ ಮಿಲ್ಕೆ ಹಾಡು ಕೇಳ್ತಿದ್ದಂತೆ ಸುಶ್ಮಿತಾ ಸ್ಟೆಪ್ಸ್ ಹಾಕಲು ಶುರುಮಾಡಿದ್ಲು. ಎಲ್ಲರೆದುರು ಸುಶ್ಮಿತಾ ಮನಬಿಚ್ಚಿ ಡಾನ್ಸ್ ಮಾಡಿದ್ದಾಳೆ.

ಬುದ್ಧಿವಂತ ಸ್ಟಾರ್ ಗಳ ಪಟ್ಟಿಯಲ್ಲಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೆಸರಿರುತ್ತದೆ. ಅವಕಾಶ ಸಿಕ್ಕಾಗ ಮೋಜು ಮಾಡೋದನ್ನು ಸುಶ್ಮಿತಾ ಬಿಡೋದಿಲ್ಲ. ಇತ್ತೀಚೆಗೆ ಕಾಲೇಜು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಸುಶ್ಮಿತಾ ಸೇನ್ ಕಾಲೇಜು ವಿದ್ಯಾರ್ಥಿಗಳ ಜೊತೆ ಸ್ಟೆಪ್ಸ್ ಹಾಕಿದ್ಲು. ಸುಶ್ಮಿತಾ ಡಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸುಶ್ಮಿತಾ ಡಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By

Shruthi G

Reported By

Madhu shree

Comments