ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಕಿರಿಕ್ ಬೆಡಗಿ
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸಂಯುಕ್ತಾ ಹೆಗಡೆ ಎಷ್ಟು ಸ್ಟ್ರಾಂಗ್ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೆ, ಅವರು ನಿನ್ನೆ ಕಣ್ಣೀರು ಹಾಕಿದರು.ಹೌದು, ಸಂಯುಕ್ತಾ ಬಿಗ್ ಮನೆಗೆ ಕಾಲಿಟ್ಟ ಮೊದಲ ದಿನವೇ ತಮ್ಮ ಬೋಲ್ಡ್ ಆ್ಯಂಡ್ ನೇರ ನುಡಿಯ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ರು. ಅವರು ನಿಜ ಜೀವನದಲ್ಲಿಯೂ ಹೀಗೆ ಬೋಲ್ಡ್ ಆಗಿದ್ದಾರೆ. ಯಾವುದನ್ನು ತಲೆಗೆ ಹಚ್ಚಿಕೊಳ್ಳುವುದಿಲ್ಲ, ಮಾನಸಿಕವಾಗಿ ಅವರು ತುಂಬಾ ಸ್ಟ್ರಾಂಗು ಎನ್ನುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಆದರೆ, ನಿನ್ನೆ ನಡೆದ ಘಟನೆಯೊಂದು ಅವರು ಎಷ್ಟೊಂದು ಎಮೋಷನಲ್ ಎಂಬುದನ್ನು ತೋರಿಸಿಕೊಟ್ಟಿತ್ತು.
ಟಾಸ್ಕ್ ನಡೆಯುತ್ತಿದ್ದ ವೇಳೆ ಮಧ್ಯೆ ಮಧ್ಯೆ ಮಾತನಾಡುತ್ತಿದ್ದರು ಸಂಯುಕ್ತಾ. ಯಾರಾದ್ರೂ ತಪ್ಪು ಮಾಡಿದ್ರೆ ಕೂಡಲೇ ಅದನ್ನು ಎತ್ತಿ ತೋರಿಸುತ್ತಿದ್ದರು. ಆದರೆ, ಇವರ ಈ ನಡೆ ಮನೆಯ ಇತರ ಸದಸ್ಯರಿಗೆ ಇಷ್ಟವಾಗುತ್ತಿಲ್ಲ. ಇದನ್ನು ಗಮನಿಸಿದ ಲಾಸ್ಯ, ತನ್ನ ಗೆಳತಿ ಸಂಯುಕ್ತಾಳಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ಆದರೆ, ಇದಕ್ಕೆ ಒಪ್ಪದ ಸಂಯುಕ್ತಾ, ನಾನು ಅನಾವಶ್ಯಕವಾಗಿ ಮಾತನಾಡುತ್ತಿಲ್ಲ, ಟಾಸ್ಕ್‌ನಲ್ಲಿಯ ತಪ್ಪುಗಳನ್ನು ಮಾತ್ರ ಕ್ಯಾಪ್ಟನ್‌ಗೆ ತಿಳಿಸುತ್ತೇನೆ. ಇದರಲ್ಲಿ ನನ್ನ ತಪ್ಪು ಇಲ್ಲ ಎಂದು ವಾದಿಸಿದರು. ಹೀಗೆ ಲಾಸ್ಯ ಹಾಗೂ ಸಂಯುಕ್ತಾ ನಡುವಿನ ಸಂಭಾಷಣೆ ಕೆಲ ಹೊತ್ತುಗಳ ವರೆಗೆ ಮುಂದುವರೆಯಿತು. ಕೊನೆಯಲ್ಲಿ ಸಂಯುಕ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ನಾನು ತಪ್ಪುಗಳನ್ನು ಮಾತ್ರ ಹೇಳುತ್ತೇನೆ. ಬೇರೆಯವರ ವಿಚಾರಗಳಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿದರು.
Comments