ಡಿಸೆಂಬರ್ 29 ರಂದು 'ಚಮಕ್' ಸಿನಿಮಾ ರಿಲೀಸ್

'ಕಿರಿಕ್ ಪಾರ್ಟಿ' ಚೆಲುವೆ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಮತ್ತು 'ಅಂಜನಿಪುತ್ರ' ಚಿತ್ರಗಳಲ್ಲಿ ಯಾವುದು ಮೊದಲು ಬಿಡುಗಡೆಯಾಗುತ್ತೆ ಎಂಬ ಕುತೂಹಲ ಹೆಚ್ಚಿತ್ತು.
ಇದೀಗ, ಗಣೇಶ್ ನಾಯಕನಾಗಿರುವ 'ಚಮಕ್' ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ್ದು, ಇದೇ ಡಿಸೆಂಬರ್ 29 ರಂದು ತೆರೆಗೆ ಬರ್ತಿದೆ. ಡಿಸೆಂಬರ್ 29ಕ್ಕೂ ನಟಿ ರಶ್ಮಿಕಾಗೂ ಹತ್ತಿರದ ಸಂಬಂಧ ಇದೆ ಅಂದ್ರೆ ನಂಬಲೇಬೇಕು. ಯಾಕಂದ್ರೆ, ಕಳೆದ ವರ್ಷ ಅದೇ ಸಮಯದಲ್ಲಿ ರಶ್ಮಿಕಾ ಅಭಿನಯದ ಚೊಚ್ಚಲ ಸಿನಿಮಾ 'ಕಿರಿಕ್ ಪಾರ್ಟಿ' ತೆರೆಗೆ ಬಂದಿತ್ತು. ಅಂದ್ರೆ, ಡಿಸೆಂಬರ್ 30 ರಂದು 'ಕಿರಿಕ್ ಪಾರ್ಟಿ' ಬಿಡುಗಡೆಯಾಗಿತ್ತು.ಇದೀಗ, ಹೆಚ್ಚು ಕಡಿಮೆ ಅದೇ ದಿನಾಂಕದಲ್ಲಿ ಎರಡನೇ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಇದು ಕಾಕತಾಳೀಯವೋ ಅಥವಾ ರಶ್ಮಿಕಾಗೆ ಈ ದಿನಾಂಕದಲ್ಲಿದ್ದೇನಾದರೂ ಅದೃಷ್ಟ ಇದೆಯಾ ಎಂಬ ಕುತೂಹಲ ಕಾಡುತ್ತಿದೆ.ಡಿಸೆಂಬರ್ ಅಂತ್ಯದಲ್ಲಿ ಬಂದಿದ್ದ 'ಕಿರಿಕ್ ಪಾರ್ಟಿ' ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೇ, ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿತ್ತು. ಇದೀಗ, 'ಚಮಕ್' ಚಿತ್ರದ ಮೇಲೂ ಅಂತಹ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
Comments